ಮೇ 29, 2012

Kannada Text to Speech

ಕನ್ನಡ ಬರಹವನ್ನು ನುಡಿಯಬಲ್ಲ ತಂತ್ರಾಂಶ ನನಗೆ ತಿಳಿದ ಮಟ್ಟಿಗೆ ತುಂಬಾ ಅಪರೂಪ. IISc ಯ MILE Labನ online tool ಹಾಗು ಶ್ರೀಧರ್ ಅವರ ಸಹಾಯದಿಂದ ಅಳವಡಿಸಿರುವ e-speak ಎಂಬ ಮುಕ್ತ ತಂತ್ರಾಂಶ. IISc ನವರ ಟೂಲ್ ಅನ್ನು ಪ್ರಯೋಗ ಮಾಡಿ ನೋಡಿದೆ. ತುಂಬಾ ಚೆನ್ನಾಗಿದೆ. ಅದರಲ್ಲಿ ಶಬ್ದಗಳ ಉಚ್ಚಾರಣೆ ಸ್ಪಷ್ಟವಾಗಿದ್ದು ಸಹಜವಾಗಿದೆ. ಇದು online ಸಲಕರಣೆಯಾಗಿರುವುದರಿಂದ ಇದನ್ನು ಬಳಸಲು internet ಬೇಕು ಹಾಗು ಇದಕ್ಕೆ ನಾವು ನುಡಿಯಬೇಕಾದ ಬರಹವನ್ನು ನಕಲು ಮಾಡಿ ಇದರಲ್ಲಿ ಅಂಟಿಸಬೇಕು. 'e-Speak'ಅನ್ನು ಸಹ ನಾನು ಪರೀಕ್ಷಿಸಿದೆ. ಅದರಲ್ಲಿ ತುಂಬಾ ರೂಪುಗಳಿದ್ದು ಉಪಯೋಗಿಸಲು ತುಂಬಾ ಸುಲಭ ಎನಿಸುತದೆ. ಇದರಲ್ಲಿ ಹಲವಾರು ಧ್ವನಿಗಳಿವೆ ಹಾಗು ನಕಲು ಮಾಡು ಅವಶ್ಯಕತೆ ಇಲ್ಲ. ನುಡಿಯಬೇಕಾದ ಬರಹದ ಹತ್ತಿರ mouseಅನ್ನು ಇಟ್ಟರೆ ಸಾಕು ಅದೇ ನುಡಿಯುತ್ತದೆ. ಆದರೆ ಇದರ ನುಡಿ ಸರಾಗವಾಗಿಲ್ಲ, roboticಎನಿಸುತ್ತದೆ.

ನಾನು ಕೂಡ ಕನ್ನಡ TTS ತಂತ್ರಾಂಶ ರೂಪಿಸಬೇಕೆಂದು ತುಂಬಾ ಹಂಬಲಿಸಿದ್ದೆ. ಕೊನೆಗೂ ೩-೪ ದಿನಗಳ ಅವದಿಯಲ್ಲಿ "ಮುನ್ನುಡಿ ಎಂಬ ತಂತ್ರಾಂಶವನ್ನು ಸೃಷ್ಟಿಸಿದ್ದೇನೆ. ಇದು Windows OS ಅಲ್ಲಿ ಇರುವ TTSಇನ ಧ್ವನಿಗಳನ್ನು ಉಪಯೋಗಿಸುತ್ತದೆ. ಇದು ಕೂಡ 'ಧ್ವನಿ'ಯಂತೆ SSML ಆಧಾರಿತವಾದದ್ದು. ಇದನ್ನು ಇಲ್ಲಿಂದ ಡೌನ್ಲೋಡ್ ಮಾಡಬಹುದು.

ಏಪ್ರಿ 25, 2011

Kannada Fonts

ಯಾವುದೇ ಒಂದು ವಸ್ತುವನ್ನು ಉಪಯೋಗಿಸಬೇಕೆಂದರೆ ಅದು ಆಕರ್ಷಕವಾಗಿರಬೇಕು. ಆ ವಸ್ತು ಎಷ್ಟೇ ಉಪಯುಕ್ತವಾದದ್ದಾದರು ನೋಡಲು ಅಂದವಾಗಿರದಿದ್ದರೆ ಜನರು ಅದನ್ನು ಉಪಯೋಗಿಸುವುದು ಬಹಳ ಅಪರೂಪ. ಹಾಗಾಗಿಯೇ ನಾವು ಸೃಷ್ಟಿಸುವ ಕನ್ನಡದ ಅಂತರ್ಜಾಲ ತಾಣಗಳಾಗಲಿ, ಬ್ಲಾಗ್ ಗಳಾಗಲಿ ಅಥವಾ ಕನ್ನಡ ತಂತ್ರಾಂಶಗಳಾಗಲಿ ಆಕರ್ಷಕವಾಗಿರಬೀಕು.

ಅಂತರ್ಜಾಲದ ತಾಣಗಳನ್ನ ಆಕರ್ಷಕವಾಗಿ ಮಾಡಲು ಬೇಕಾಗಿರುವುದು ಒಳ್ಳೆಯ ಫಾಂಟ್ ಗಳು. ಆದರೆ, ಉಚಿತವಾಗಿ ಸಿಗುವ Unicode ಕನ್ನಡ ಫಾಂಟ್ಗಳು ಬಹಳ ಕಡಿಮೆ. ಇದರಿಂದಾಗಿ, ಈಗ ಚಾಲ್ತಿಯಲ್ಲಿರುವ ಹಲವಾರು ಕನ್ನಡ websiteಗಳು ನಿರ್ಧಾರಿತ ಫಾಂಟ್ ತಂತ್ರಜ್ಞಾನವಾದ Unicodeಅನ್ನು ಬಳಸುತ್ತಿಲ್ಲ. ಇದರಿಂದಾಗಿ ಈ ವೆಬ್ ಸೈಟ್ ಗಳನ್ನು ವೀಕ್ಷಿಸಲು plug-inಗಳನ್ನೂ install ಮಾಡಬೇಕಾಗುತ್ತದೆ. ಈ plug-inಗಳು ಬಹುಪಾಲು windows operating system ಮತ್ತು internet explorerಇಗಾಗಿಯೇ ಮಾಡಿರಲಾಗುತ್ತವೆ. ಹಾಗಾಗಿ, ಈ ವೆಬ್ ಸೈಟ್ ಗಳನ್ನು Mac ಅಥವ Linuxನಲ್ಲಿ ವೀಕ್ಷಿಸುವುದಕ್ಕಾಗುವುದಿಲ್ಲ.

ಈ ಕಾರಣದಿಂದಾಗಿಯೇ ನಾನು ನನ್ನದೇ ಫಾಂಟ್ಗಳನ್ನು ಸೃಷ್ಟಿಸುವುದಾಗಿ ಆಲೋಚಿಸಿದ್ದೇನೆ. ಇದಕ್ಕಾಗಿ ನಾನು High-Logic Fontcreatorಅನ್ನುವ ತಂತ್ರಾಂಶವನ್ನು ಖರಿದಿಸಿದ್ದೇನೆ. ಇದು ಮಿಕ್ಕ Font editorಗಳಿಗಿಂತ ಕಡಿಮೆ ಬೆಲೆಯುಳ್ಳ, ಉಪಯೋಗಿಸಲು ಸುಲಭವಾದ, ಹಾಗು Mac ಮತ್ತು Windowsನಲ್ಲಿ ಬಳಸಬಹುದಾದ ತಂತ್ರಾಂಶವೆನ್ನುವ ಕಾರಣಗಳಿಂದಾಗಿ ಇದನ್ನು ಖರಿದಿಸಿದೆ. ಮುಕ್ತ ತಂತ್ರಾಂಶವಾದ
FontForgeಅನ್ನು ಬಲಸಬಹುದಾಗಿತ್ತು. ಆದರೆ, ಅದನ್ನು install ಮಾಡುವುದು ಕಷ್ಟ ಹಾಗು ಬಳಸುವುದು ಕಠಿಣ.

High-Logic FontCreator ಫಾಂಟ್ಗಳನ್ನು TrueType Font(ttf) ಶೈಲಿಯಲ್ಲಿ ರಚಿಸುತ್ತದೆ. ನಾನು ಫಾಂಟ್ಗಳನ್ನು ರಚಿಸಲು Microsoft ಕೊಡುವ Tunga.ttfಅನ್ನು ಆಧಾರವಾಗಿ ಉಪಯೋಗಿಸಿದ್ದೇನೆ. ನಾನು ಈಗ ಫಾಂಟ್ಗಳನ್ನು ಸೃಷ್ಟಿಸಲು typography ಕಲಿಯಬೇಕೆಂದು ಯೋಚಿಸುತ್ತಿದ್ದೇನೆ. ಸಧ್ಯಕ್ಕೆ ಪಂಚರಂಗಿ ಹಾಗು ಅಮೃತಧಾರೆಯ ಚಿತ್ರಗಳ ಹೆಸರಿನಲ್ಲಿರುವ ಫಾಂಟ್ಗಳನ್ನು ರೂಪಿಸುತ್ತಿದ್ದೇನೆ. ಇವು ಅಪೂರ್ಣವಾಗಿರುವ ಕಾರಣ ಇನ್ನೂ ಉಪಯೋಗಿಸುವ ಸ್ಥಿತಿಯಲ್ಲಿಲ್ಲ. ಆದರೆ, ಪರೀಕ್ಷಿಸಬೇಕೆಂದರೆ ಅವುಗಳನ್ನು ಇಲ್ಲಿಂದ ಡೌನ್ಲೋಡ್ ಮಾಡಬಹುದು.



ನಿಮ್ಮ ಬಳಿ ಉತ್ತಮಮಟ್ಟದ ಫಾಂಟ್ಗಳ ಚಿತ್ರಗಳು ಇದ್ದರೆ ನನಗೆ ತಿಳಿಸಿ. ನಾನು ಅವುಗಳನ್ನು High-Logic FontCreatorನಲ್ಲಿ ರಚಿಸಲು ಪ್ರಯತ್ನಿಸುವೆ.

ಫೆಬ್ರವರಿ 2, 2011

More Reasons to Love iPhone

ನನಗೆ ಐಫೋನ್ ಪ್ರೀತಿಸಲು ಇನ್ನಷ್ಟು ಕಾರಣಗಳು ಸಿಕ್ಕಿವೆ.

ವಾಯ್ಸ್ ಕಂಟ್ರೋಲ್

ಮೊದಲನೆಯದಾಗಿ ವಾಯ್ಸ್ ಕಂಟ್ರೋಲ್. ಐಫೋನ್ ಇನ ಮಧ್ಯದ ಗುಂಡಿಯನ್ನು (home button) ೨ ಕ್ಷಣಗಳಿಗಿಂತ ಹೆಚ್ಚು ಸಮಯ ಒತ್ತಿಟ್ಟಿ ಕೊಂಡಾಗ voice control ಪ್ರಾರಂಭವಾಗುತ್ತದೆ. ವಾಯ್ಸ್ ಕಾಂಟ್ರೋಲ್ನ ಮೂಲಕ ನಾವು ನಮ್ಮ ದ್ವನಿಯಿಂದ ಐಫೋನ್ ಅನ್ನು ನಿಯಂತ್ರಿಸಬಹುದು. ಐಫೋನ್ ಅನ್ನು ನಿಯಂತ್ರಿಸಲು ಕೆಲವು ಆಜ್ಞೆಗಳನ್ನ (commands) ಬಳಸಬೇಕು.  ಇಂತಹ ಅಗ್ನೆಗಳಿಂದ ಐಫೋನ್ ಅನ್ನು ಹಾಡು ಪ್ರಾರಂಬಿಸಲು/ನಿಲ್ಲಿಸಲು ಅಥವಾ ಐಫೋನ್ ನಲ್ಲಿರುವ ಸಮಪರ್ಕಗಳಿಗೆ ಕರೆ ಮಾಡಲು ಅಥವಾ ಯಾವುದಾದರೋ ಸಂಖ್ಯೆಗೆ ಕರೆ ಮಾಡಲು ನಿರ್ದೇಶಿಸಬಹುದು. ಉದಾಹರಣೆಗೆ: voice control ಶುರುವಾದ ನಂತರ call Ajeya ಎಂದರೆ ಐಫೋನ್ ನಲ್ಲಿರುವ Ajeya ಅನ್ನೋ ಸಂಪರ್ಕಕ್ಕೆ ಕರೆ ಮಾಡುತ್ತದೆ.

ಆದರೆ ನಾನು ನನ್ನ ಸಂಪರ್ಕಗಳ ಹೆಸರನ್ನು ಕನ್ನಡ unicode ಲಿಪಿಯಲ್ಲಿ ಇಟ್ಟಿದ್ದೇನೆ. ಹಾಗಾಗಿ ನನಗೆ ವಾಯ್ಸ್ ಕಂಟ್ರೋಲ್ ಸರಿಯಾಗಿ ಕೆಲಸ ಮಾಡುತ್ತದೋ ಎಂಬ ಅನುಮಾನವಿತ್ತು. Apple ಅವರ ಆಲೋಚನಾ ಪೂರ್ಣತೆಯನ್ನು ಮೆಚ್ಚಬೇಕು. ನನ್ನ ಸಂಪರ್ಕಗಳ ಹೆಸರು ಕನ್ನಡ unicode ನಲ್ಲಿದ್ದರೂ ಐಫೋನ್ ಸರಿಯಾಗಿ ಅರ್ಥ ಮಾಡಿಕೊಂಡಿತು. ಇದು ಭಾರತೀಯ ಉಚ್ಚಾರಣೆಗೆ ಸ್ವಲ್ಪ ಕಷ್ಟಪಟ್ಟರೂ ಬಹುತೇಕ ಸಮಯ ಸರಿಯಾಗಿಯೇ ಕೆಲಸ ಮಾಡುತ್ತದೆ.



ಸಂಪರ್ಕಗಳು

ಐಫೋನ್ ನ "My Contacts" ನಲ್ಲಿ ಹೆಸರುಗಳನ್ನ ಬೇಗ ಹುಡುಕಲು ಬಲ ಬಾಗದಲ್ಲಿ A-Z -# ಎಂಬಂತೆ ಅಕ್ಷರ ಪಟ್ಟಿಯನ್ನು ಕೊಟ್ಟಿದ್ದಾರೆ. ಈ ಅಕ್ಷರಗಳ ಮೇಲೆ ಒತ್ತಿದರೆ ಆಯಾ ಅಕ್ಷರಗಳಲ್ಲಿ ಶುರುವಾಗುವ ಹೆಸರುಗಳು ಕಾಣುತ್ತವೆ. ಆದರೆ ಕನ್ನಡ ಅಕ್ಷರಗಳು ಇಲ್ಲದ ಕಾರಣ ಮತ್ತು ನನ್ನ ಸಂಪರಗಳು ಕನ್ನಡ unicode ಲಿಪಿಯಲ್ಲಿರುವುದರಿಂದ ಸಂಪರ್ಕಗಳನ್ನು ಹುಡುಕುವುದು ತುಂಬಾ ಕಷ್ಟವಾಗುತ್ತಿತ್ತು. 


ಆದರೆ, Apple ನವರು ಇದಕ್ಕೆ ಪರಿಹಾರವಾಗಿ ಒಂದು ವಿದಾನವನ್ನು ಕೊಟ್ಟಿದ್ದಾರೆ. ನಮಗೆ ಬೇಕಾದ ಸಂಪರ್ಕವನ್ನು edit ಮಾಡಿದ ನಂತರ ಕೆಳಗಿರುವ "Add a field " ಗುಂಡಿಯನ್ನು ಒತ್ತಬೇಕು. ಮುಂದಿನ ಪುಟದಲ್ಲಿ "Phonetic First  Name" / "Phonetic Last  Name" ಅನ್ನು ರೋಮನ್ ಲಿಪಿಯಲ್ಲಿ ತುಂಬಬೇಕು.


ಹೀಗೆ ತುಂಬಿದ ನಂತರ "Done" ಒತ್ತಿ ಉಳಿಸಬೇಕು. ಉಳಿಸಿದ ನಂತರ ನಮ್ಮ ಸಂಪರ್ಕ ಈಗ ಸರಿಯಾಗಿ ಆಂಗ್ಲ ಅಕ್ಷರದ section ನಲ್ಲಿ ಕಾಣಿಸುತ್ತದೆ.

ಜನವರಿ 28, 2011

ಪ್ರೀತಿ

ಪ್ರೀತಿಯ ಹಿತ ಪಥದ ಮೇಲೆ
ರತಿಪತಿಯ ಲೀಲೆ
ಸ್ವಾತಿಯ ಅಮಿತ ಪದಗಳ ಸುರಿಮಳೆ
ಕೊನೆ ಇಲ್ಲದ ಭಾವನೆಗಳಿಗೆ

ಜನವರಿ 27, 2011

Kannada Lyrics Finder

ನಾನು ಸಧ್ಯಕ್ಕೆ iTunes plugin ಒಂದರ ಮೇಲೆ ಕೆಲಸ ಮಾಡುತ್ತಿದ್ದೇನೆ. ಈ plugin  iTunesಇನಲ್ಲಿ ನಡೆಯುತ್ತಿರುವ ಹಾಡಿನ ಸಾಹಿತ್ಯವನ್ನು http://www.kannadalyrics.com/ ಇನಿಂದ ತೋರಿಸುತ್ತದೆ. ಇದ ಸಾಹಿತ್ಯವನ್ನು ಹುಡುಕಲು, ಹಾಡಿನ ಹೆಸರು ಹಾಗು ಚಿತ್ರದ ಹೆಸರು ಕನ್ನಡ unicodeಇನಲ್ಲಿ ಇರಬೇಕು ಹಾಗು genre "Kannada"  ಎಂದು set ಅಗಿರಬೇಕು. ಇದನ್ನು ಉಪಯೋಗಿಸಲು iTunes 10.1.1.4 ಅಥವ ಹೆಚ್ಚಿನ version ಇರಬೇಕು (windows only).


ಇದು ಇನ್ನು ಪೂರ್ಣವಾಗಿಲ್ಲ ಹಾಗಾಗಿ ಹಲವಾರು features ಇನ್ನು ಇಲ್ಲ. ಇದರಲ್ಲಿರುವ ನ್ಯೂನತೆ ಎಂದರೆ ಹಾಡಿನ album art ಸರಿಯಗಿ ತೋರುವುದಿಲ್ಲ.


ಮುಂದಿನ versionಗಳಲ್ಲಿ ನಾನು ತರಲು ಇಚ್ಛಿಸುವ features ಹೀಗಿವೆ:


೧) ಹಾಡಿನ ಹೆಸರು ಹಾಗು ಚಿತ್ರದ ಹೆಸರು ಆಂಗ್ಲದಲ್ಲಿದ್ದರೂ ಅದನ್ನು ಹುಡುಕುವುದು
೨) album artಅನ್ನು ಸರಿಯಾಗಿ ತೋರಿಸುವುದು.
೩) ಸಾಹಿತ್ಯ ಹುಡುಕುವ ಕ್ರಮಾವಳಿಯನ್ನು ಇನ್ನು ಶುದ್ಧೀಕರಿಸುವುದು.
೪) ಚಿತ್ರದ album art ಇಲ್ಲದಿದ್ದಲ್ಲಿ, ತಾನೇ ಹುಡುಕಿ ತೋರಿಸುವುದು.


ನೀವು ಇದನ್ನು ಪರೀಕ್ಷಿಸಬೇಕೆಂದರೆ ಇಲ್ಲಿಂದ download ಮಾಡಿ.







Update 1: Kannada Lyrics Finder ಈಗ ಹಾಡಿನ ಹೆಸರು ಹಾಗು ಚಿತ್ರದ ಹೆಸರು ರೋಮನ್ ಅಕ್ಷರಗಳಲಿದ್ದರೂ ಸಾಹಿತ್ಯವನ್ನು ಹುದುಕಬಲ್ಲದು. ಸಾಹಿತ್ಯ ಹುಡುಕುವ ಕ್ರಮಾವಳಿಯನ್ನು ಇನ್ನೂ ಶುದ್ಧೀಕರಿಸಲಾಗಿದೆ. 

Update 2: Kannada Lyrics Finder ಈಗ ಕನ್ನಡೇತರ ಭಾಷೆಯ ಹಾಡುಗಳ ಸಾಹಿತ್ಯವನ್ನೂ  ತೋರಿಸಬಲ್ಲದು. ಇದು ಸಾಹಿತ್ಯವನ್ನೂ http://tunewiki.com ನಿಂದ ಹುಡುಕಿ ತೋರಿಸುತ್ತದೆ.

ಜನವರಿ 10, 2011

Kannada Dictionary

ಪ್ರಿಯ ಗೆಳೆಯರೇ,

ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

ಒಂದು ಭಾಷೆ ಬೆಳಯಬೇಕಾದರೆ ಅದರ ಶಬ್ಧಕೋಶ ಅಥವಾ ನಿಘಂಟು (dictionary) ಕೂಡ ಬೆಳಯಬೇಕು. ಕನ್ನಡ ಬೆಳಯಬೇಕಾದರೆ ಅದರ ನಿಘಂಟು ಕೂಡ ಬೆಳಯಬೇಕು.

ಕನ್ನಡದ ಮೊದಲನೇ ನಿಘಂಟನ್ನು ರಚಿಸಿದವರು Rev. Ferdinand Kittel ಎಂಬ Germany ಮೂಲದವರು.  ಇವರು ಮಂಗಳೂರು, ಧಾರವಾಡ ಹಾಗು ಮಡಿಕೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರು ಹಲವಾರು ಕನ್ನಡ ಕವಿತೆಗಳನ್ನ ಬರೆದಿದ್ದರು. ಇವರು ೧೮೯೪ನಲ್ಲಿ ಮೊದಲನೇ ಕನ್ನಡ-ಆಂಗ್ಲ ನಿಘಂಟನ್ನು ರಚಿಸಿದರು.

ಅಂತರ್ಜಾಲದಲ್ಲಿ ಕೇವಲ ಕೈ ಬೆರಳುಗಲ್ಲಲಿ ಎಣಿಸುವಷ್ಟು ಕನ್ನಡ ನಿಘಂತುಗಳಿವೆ. ಅದರಲ್ಲಿ http://www.baraha/kannada/index.php ಅತಿ ಜನಪ್ರಿಯವಾದದ್ದು ಹಾಗು unicode ಬಳಸುವ ನಿಘಂಟು. ನನಗೆ ಅನಿಸಿದ ಇದರಲ್ಲಿ ಇರುವ ಒಂದು ಕೊರತೆ ಅಂದರೆ, ನಮಗೆ ಯಾವುದೇ ಪದದ ಅರ್ಥ ಬೇಕಾಗಿರುವಾಗ ನಾವು ಈ ಅಂತರ್ಜಲಕ್ಕೆ ಹೋಗಿ, ಪದವನ್ನು type ಮಾಡಿ ಹುಡುಕಬೇಕು. ಇದು ಸ್ವಲ್ಪ ಸಮಯ ವೆಚ್ಚ ಮಾಡುತ್ತದ್ದೆ. ಆದರಿಂದ ನಾನು ಇದೇ ಅಂತರ್ಜಾಲದಿಂದ ಅರ್ಥಗಳನ್ನು ತೋರಿಸುವ ಒಂದು native windows client ಅನ್ನು ನಿರ್ಮಿಸಿದ್ದೇನೆ. ಇದು ಉಪಯೋಗಿಸಲು ಬಲು ಸುಲಭವಾಗಿರುವ ಮತ್ತು ಸಮಯ ಉಳಿಸುವ ತಂತ್ರಾಂಶ.

ಒಮ್ಮೆ ತೆರದ ನಂತರ ಈ ತಂತ್ರಾಂಶವನ್ನು ಕಿರಿದಾಗಿ ಮಾಡಿದರೆ ಅದು system tray ನಲ್ಲಿ ಉಳಿದುಕೊಳ್ಳುತ್ತದೆ. ಹಾಗಾಗಿ task bar ಇನ ಜಾಗ ಉಳಿದುಕೊಳ್ಳುತ್ತದೆ ಮತ್ತು ಇತರೆ ಕಾರ್ಯಗಳಿಗೆ ಅಡ್ಡಿ ಬರುವುದಿಲ್ಲ. ಇದನ್ನು ಪುನಃ ಬಳಸಬೇಕೆಂದಲ್ಲಿ system tray ನಲ್ಲಿ ಇದರ icon ಇನ ಮೇಲೆ ಎರಡು ಸಲ ಒತ್ತಿದ ನಂತರ ಇದು ಮತ್ತೆ ಹಿರಿದಾಗುತ್ತದೆ.

ಈ ತಂತ್ರಾಂಶ ಸಧ್ಯ Windows ಇಗಾಗಿ ನಿರ್ಮಿಸಲಾಗಿದೆ. ಸಮಯ ಸಿಕ್ಕಲ್ಲಿ Mac, iPhone ಮುಂತಾದ ಯಂತ್ರಗಳಿಗೂ ನಿರ್ಮಿಸಲು ಪ್ರಯತ್ನಿಸುವೇನು. ಈ ತಂತ್ರಾಂಶವನ್ನು ನೀವು http://kannadadictionary.googlecode.com/files/KannadaDictionary%20v1.4.msiಇಂದ install ಮಾಡಬಹುದು.

ಜೂನ್ 23, 2010

Kananda on iPhone

ಈ ಹಿಂದೆ ಐಫೋನ್ ನಲ್ಲಿದ್ದ ದೋಷಗಳ ಬಗ್ಗೆ ನಾನು ಮೊದಲು ಬರೆದ ಲೇಖನೆ ಇಲ್ಲಿದೆ.  ಕೊನೆಗೂ ಐಫೋನ್ ನಲ್ಲಿದ್ದ ಕನ್ನಡ font ರೂಪಿಸುವ ದೋಷವನ್ನು iOS ೪ ರಲ್ಲಿ ಸರಿ ಮಾಡಲಾಗಿದೆ. ಈಗಂತು ಐಫೋನ್ ನಲ್ಲಿ ಕನ್ನಡ ಓದೋದಕ್ಕೆ ತುಂಬಾ ಮಜಾ ಬರುತ್ತೆ. iOS ಇನಲ್ಲಿ ಉಪಯೋಗಿಸುತ್ತಿರುವ ಕನ್ನಡ font ಇನ ಹೆಸರು Kannada Sangam MN. 

ಆದ್ರೆ ಬೇಸರದ ಸಂಗತಿ ಅಂದ್ರೆ  keyboard ಹಾಗು ಪ್ರಾದೇಶಿಕ ವಿಧಾನದಲ್ಲಿ (regional format ) 
ಇನ್ನೂ ಕನ್ನಡಕ್ಕೆ ಬೆಂಬಲವಿಲ್ಲ. 

Update: ಐಫೋನ್ ಇನಲ್ಲಿ ಸ್ವಂತವಾದ ಕನ್ನಡ Keyboard ಇಲ್ಲದ್ದಿದ್ದರೂ iTransliterate ಅನ್ನೋ ಒಂದು app ಇದೆ. ಅದನ್ನ ಬಳಸಿಕೊಂಡು ನಾವು ಕನ್ನಡದಲ್ಲಿ ಟೈಪ್ ಮಾಡಬಹುದು. iTransliterate ಗೂಗಲ್ API ಗಳನ್ನ ಬಳಸುತ್ತದೆ. ಆದ್ದರಿಂದ ಅದು ಇಂಟರ್ನೆಟ್ ಉಪಯೋಗಿಸುತ್ತದೆ. ನೀವು ಸೀಮಿತವಾದ data ಪ್ಲಾನ್ ಉಪಯೋಗಿಸುತಿದ್ದರೆ ನಿಮ್ಮ ಜೇಬಿಗೆ ಇದು ಭಾರವಾಗಬಹುದು.













Prior to this, I had written a post regarding the defects in iPhone. Finally, the issue with rendering Kannada fonts on iphone has been resolved in iOS 4. I am enjoying reading Kannada on the iphone. The Kannada font used in iOS is called Kannada Sangam MN. However, there is still no support for Kannada keyboard and Region Format on the iphone.

Update: Though iPhone does not have its own Kannada keyboard, there is an app called iTransliterate. Using this you can type in Kannada. iTransliterate uses Google APIs. Hence it uses internet. If you are using a limited data plan, it will be expensive.