ಫೆಬ್ರ 9, 2009

ಐಫೋನಿಗೆ ಕೊನೆಗು ಬಂತು ರೇಡಿಯೊ





ಎಲ್ಲಾ ಪ್ರಮುಖ ಫೋನ್ ಕಂಪನಿಗಳು ಈಗಂತು ಏನಿಲ್ಲ ಅಂದ್ರೂ ರೇಡಿಯೊ ಅಂತು ಇಡೊದು ಮರೆಯೊಲ್ಲ. ಅಂತದ್ರಲ್ಲಿ Appleನವರು ಇಂತಹದೊಂದು feature ಇಡದೆ ದೊಡ್ಡ ತಪ್ಪ ಮಾಡಿದ್ರು. ಆದರೆ ಕೊನೆಗು ಈ ಸಮಸ್ಯೆ ಪರಿಹರಿಸೊಕೆ Griffin Technologyರವರು ಈ ಐಫೋನ್ accessory ಬಿಡುಗಡೆ ಮಾಡಿದ್ದಾರೆ. ಇದರ ಬೆಲೆ ಸುಮಾರು $60.00 (ರೂ. ೩೦೦೦). ಒಂದು ರೇಡಿಯೊಗೆ ಇಷ್ಟೆೊಂದು ಬೆಲೆ ಅನಿಸ್ದ್ರು, ಒಂದೆ ಯಂತ್ರದಲ್ಲಿ ಎಲ್ಲ ಸೌಲಭ್ಯ ಸಿಗೊದ್ರಿಂದ ಈ ಬೆಲೆ ಸಮಂಜಸ ಅನ್ಸುತ್ತೆ. 

ಮಾರ್ಚ್ ತಿಂಗಳಲ್ಲಿ ಈ accessoryಗೆ iFMಅನ್ನೊ app ಬೇರೆ ಬಿಡುಗಡೆ ಮಾಡ್ತಾರಂತೆ. iFMನಿಂದ ಈ accessoryಅನ್ನು ನಿಯಂತ್ರಿಸ ಬಹುದು. ಇದಲ್ಲದೆ iFM ನಮ್ಮ ಸ್ಥಳೀಯ ರೇಡಿಯೊ ಪ್ರಸಾರ ಕೇಂದ್ರಗಳ ಪಟ್ಟಿಯನ್ನು ತೋರಿಸಬಲ್ಲದು. ಇದು ಪ್ರಸಾರವಾಗುತ್ತಿರುವ ಹಾಡಿನ ಹೆಸರು, ಗಾಯಕ, ಚಿತ್ರ ಮುಂತಾದ ಮಾಹಿತಿಯನ್ನು ಕೂಡ ಕೊಡಬಲ್ಲದು ಅಂತಾರೆ. ಆದರೆ ಈ ಮಾಹಿತಿಗೆ ಪ್ರಸಾರ ಮಾಡುತ್ತಿರುವ ಕೇಂದ್ರ RDS protocol ಬಳಸಬೇಕು. ಆದ್ರೆ ಬೆಂಗ್ಳೂರಲ್ಲಿ ಎಷ್ಟು ವಾಹಿನಿಗಳು ಇದನ್ನ ಬಳಸ್ತಾವೊ ಗೊತ್ತಿಲ್ಲ


ಇದು ಸದ್ಯಕ್ಕೆ ನನಗೆ ತಿಳಿದ ಮಟ್ಟಿಗೆ ಬೆಂಗ್ಳೂರಲ್ಲಿ ಎಲ್ಲು ಸಿಗ್ತಿಲ್ಲ.

ಕಾಮೆಂಟ್‌ಗಳಿಲ್ಲ: