British Airways ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
British Airways ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಅಕ್ಟೋ 19, 2008

‘British Airways’ನಲ್ಲಿ ಕನ್ನಡ

ನಾನು ಇತ್ತೀಚೆಗೆ ಬೆಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ನಿನ ಹೀಥ್ರೋ ವಿಮಾನ ನಿಲ್ದಾಣಕ್ಕೆ ‘British Airways’ (ಬಿಏ೧೧೮) ವಿಮಾನದಲ್ಲಿ ಪ್ರಯಾಣ ಮಾಡ್ದೆ. ‘British Airways’ಇನ ಸೌಕರ್‍ಯಗಳನ್ನು ನೋಡಿ ಸಂತೋಷಗೊಂಡೆ. ನಿದಾನವಾಗಿ ವಿಮಾನ ಓಡುದಾರಿ (runway) ಇಂದ ಹಾರಲು ಪ್ರಾರಂಬವಾಯ್ತು. ಪದ್ಧತಿಯಂತೆ ಪರಿಚಾರಿಕೆ (Air Hostess) ವಿಮಾನದ ಸುರಕ್ಷಾ ವಿಧಾನವನ್ನು ಮೊದ್ಲು ಆಂಗ್ಲ ಭಾಷೆಯಲ್ಲಿ ಪರಿಚಯಿಸಿದನಂತರ ಹಿಂದಿಯಲ್ಲಿಯೂ ಪರಿಚೈಸಿದ್ಲು. ಆದ್ರೆ ಅವ್ಳು ಇಷ್ಟಕ್ಕೆ ನಿಲ್ಲಿಲ್ಲ. ಕನ್ನಡದಲ್ಲೂ ಕಷ್ಟಪಡ್ಕೊಂಡು ಪ್ರಕಟಿಸಿದ್ಲು. ಇದನ್ನ ಕೇಳಿ ತುಂಬಾ ಖುಷಿ ಆಯ್ತು. ಆದರೆ ಪಕ್ಕದಲ್ಲಿ ಕೂತಿದ್ದ ಹೆಂಗಸಿನ ವರ್ತನೆ ಕೋಪ ಹಾಗು ನೋವುಂಟು ಮಾಡ್ತು. ಆಕೆ ಪರಿಚಾರಿಕೆ ಕನ್ನಡದಲ್ಲಿ ಪ್ರಕಟಿಸುವಾಗ ಅಪಹಾಸ್ಯ ಮಾಡುವಂತೆ ಕಿಸಕಿಸ ಅಂತ ಕಿಸಿತಿದ್ಲು. ನೋವಿನ ಸಂಗತಿ ಅಂದ್ರೆ ಈಕೆ ಕನ್ನಡತಿ. ಈಕೆ ಕನ್ನಡತಿ ಅಂತ ತಿಳ್ದಿದ್ದು ಈಕೆ ಹಿಂದಿನ ಆಸನದಲ್ಲಿ ಕೂತಿದ್ದ, ಬಹುಷ: ತನ್ನ ಸಂಬಂದಿಯಾದ, ಇನ್ನೊಂದು ಮಹಿಳೆಯೊಂದಿಗೆ ಕನ್ನಡದಲ್ಲಿ ಮಾತಡ್ತಿದ್ದದ್ರಿಂದ.

ಪಯಣ ಸುಖವಾಗಿ ಸಾಗ್ತು. ಇನ್ನೇನು ಲಂಡನ್ನ ಹೀಥ್ರೋ ವಿಮಾನ ನಿಲ್ದಾಣ ತಲುಪುತಿರುವಂತೆ ಪರಿಚಾರಿಕನು ಮತ್ತೆ ಸುರಕ್ಷಾ ನಿಯಮಗಳನ್ನು ವಿವರಿಸ್ಲಾರಂಬಿಸಿದನು. ಯಥಾಪ್ರಕಾರವಾಗಿ ಮೊದ್ಲು ಆಂಗ್ಲದಲ್ಲಿ ತಿಳಿಸಿದನು. ನಾನು ಲಂಡನ್ನಲ್ಲಿ ಕನ್ನಡದಲ್ಲಿ ಏಕೆ ಪ್ರಕಟಿಸ್ತಾನೆ ಅಂದ್ಕೊಂಡೆ. ಆದ್ರೆ ಪರಿಚಾರಿಕ ಆಂಗ್ಲ ತದನಂತರ ಹಿಂದಿಯಲ್ಲಿ ಪ್ರಕಟಿಸದೆ ಕನ್ನಡದಲ್ಲಿ ಪ್ರಕಟಿಸಿ ನನಗೆ ಸಂತಸ ಹಾಗು ಆಶ್ಚರ್‍ಯ ಉಂಟು ಮಾಡಿದ. ಪಕ್ಕದಲ್ಲಿ ಕೂತಿದ್ದ ಹೆಂಗಸು ಮತ್ತೆ ಹಿಂದೆಕೂತ್ತಿದ್ದ ಹೆಂಗಸಿಗೆ ‘ಯಾರಿಗ್ ಅರ್ಥ ಆಗುತ್ತೆ ಅಂತ ಕನ್ನಡದಲ್ಲಿ announce ಮಾಡ್ತಾರೊ’ ಅಂತ ಹೇಳಿದ್ಲು. ಇದನ್ನ ಕೇಳಿ ಆಕೆಯ ಅಜ್ಞಾನ ತಿಳಿತು. ಅವಳ ಪ್ರಕಾರ ಪ್ರಯಾಣಿಕರೆಲ್ರಿಗೂ ಆಂಗ್ಲ ಅಥವ ಹಿಂದಿ ಅರ್ಥ ಆಗುತ್ತೆ ಆದ್ರಿಂದ ಅವುಗಳಲ್ಲಿ ‘announce’ ಮಾಡ್ಬಹುದು ಆದ್ರೆ ಕನ್ನಡ ಅರ್ಥ ಆಗೊದಿಲ್ಲ ಅದಕ್ಕೆ ಮಾಡಬಾರ್ದು ಅಂತ. ಇದು ಶಿಕ್ಷಣ ಹೊಂದಿದ ಕನ್ನಡಿಗರ ಆಲೋಚನೆ!

ನಾನು ಈ ಪ್ರಯಾಣದ ಮೊದಲು ‘Lufthansa’, ‘Jet Airways’ ಹಾಗು ‘Air India’ದಲ್ಲಿ ಪ್ರಯಾಣಿಸಿದ್ದೆ. ಆದರೆ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಪ್ರಕಟಿಸೊದನ್ನ ಕೇಳಿದ್ದು. ಕನ್ನಡದಲ್ಲೂ ಪ್ರಕಟಿಸೊ ಈ ಪದ್ಧತಿ ಬರಿ ‘British Airways’ನಲ್ಲಿದ್ಯೊ ಅಥವ ಬೆಂಗಳೂರಿಂದ ತೆರಳೊ ಎಲ್ಲಾ airwaysನಲ್ಲೂ ಹೊಸ್ದಾಗಿ ಆರಂಬಿಸಿದ್ದಾರೊ ಗೊತಿಲ್ಲ. ಒಂದು ವಿದೇಶಿ ಸಂಸ್ಥೆ ಇಂತಹ ಒಂದು ಯೋಜನೆ ಮಾಡಬಹುದಾದರೆ ನಮ್ಮ ದೇಶೀಯ (domestic) ವಿಮಾನ ಚಾಲನ ಸಂಸ್ಥೆಗಳು ಏಕೆ ಅನುಸರಿಸ್ತಿಲ್ಲೊ ಗೊತಿಲ್ಲ.