lyrics ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
lyrics ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಜನ 27, 2011

Kannada Lyrics Finder

ನಾನು ಸಧ್ಯಕ್ಕೆ iTunes plugin ಒಂದರ ಮೇಲೆ ಕೆಲಸ ಮಾಡುತ್ತಿದ್ದೇನೆ. ಈ plugin  iTunesಇನಲ್ಲಿ ನಡೆಯುತ್ತಿರುವ ಹಾಡಿನ ಸಾಹಿತ್ಯವನ್ನು http://www.kannadalyrics.com/ ಇನಿಂದ ತೋರಿಸುತ್ತದೆ. ಇದ ಸಾಹಿತ್ಯವನ್ನು ಹುಡುಕಲು, ಹಾಡಿನ ಹೆಸರು ಹಾಗು ಚಿತ್ರದ ಹೆಸರು ಕನ್ನಡ unicodeಇನಲ್ಲಿ ಇರಬೇಕು ಹಾಗು genre "Kannada"  ಎಂದು set ಅಗಿರಬೇಕು. ಇದನ್ನು ಉಪಯೋಗಿಸಲು iTunes 10.1.1.4 ಅಥವ ಹೆಚ್ಚಿನ version ಇರಬೇಕು (windows only).


ಇದು ಇನ್ನು ಪೂರ್ಣವಾಗಿಲ್ಲ ಹಾಗಾಗಿ ಹಲವಾರು features ಇನ್ನು ಇಲ್ಲ. ಇದರಲ್ಲಿರುವ ನ್ಯೂನತೆ ಎಂದರೆ ಹಾಡಿನ album art ಸರಿಯಗಿ ತೋರುವುದಿಲ್ಲ.


ಮುಂದಿನ versionಗಳಲ್ಲಿ ನಾನು ತರಲು ಇಚ್ಛಿಸುವ features ಹೀಗಿವೆ:


೧) ಹಾಡಿನ ಹೆಸರು ಹಾಗು ಚಿತ್ರದ ಹೆಸರು ಆಂಗ್ಲದಲ್ಲಿದ್ದರೂ ಅದನ್ನು ಹುಡುಕುವುದು
೨) album artಅನ್ನು ಸರಿಯಾಗಿ ತೋರಿಸುವುದು.
೩) ಸಾಹಿತ್ಯ ಹುಡುಕುವ ಕ್ರಮಾವಳಿಯನ್ನು ಇನ್ನು ಶುದ್ಧೀಕರಿಸುವುದು.
೪) ಚಿತ್ರದ album art ಇಲ್ಲದಿದ್ದಲ್ಲಿ, ತಾನೇ ಹುಡುಕಿ ತೋರಿಸುವುದು.


ನೀವು ಇದನ್ನು ಪರೀಕ್ಷಿಸಬೇಕೆಂದರೆ ಇಲ್ಲಿಂದ download ಮಾಡಿ.







Update 1: Kannada Lyrics Finder ಈಗ ಹಾಡಿನ ಹೆಸರು ಹಾಗು ಚಿತ್ರದ ಹೆಸರು ರೋಮನ್ ಅಕ್ಷರಗಳಲಿದ್ದರೂ ಸಾಹಿತ್ಯವನ್ನು ಹುದುಕಬಲ್ಲದು. ಸಾಹಿತ್ಯ ಹುಡುಕುವ ಕ್ರಮಾವಳಿಯನ್ನು ಇನ್ನೂ ಶುದ್ಧೀಕರಿಸಲಾಗಿದೆ. 

Update 2: Kannada Lyrics Finder ಈಗ ಕನ್ನಡೇತರ ಭಾಷೆಯ ಹಾಡುಗಳ ಸಾಹಿತ್ಯವನ್ನೂ  ತೋರಿಸಬಲ್ಲದು. ಇದು ಸಾಹಿತ್ಯವನ್ನೂ http://tunewiki.com ನಿಂದ ಹುಡುಕಿ ತೋರಿಸುತ್ತದೆ.

ಫೆಬ್ರ 1, 2010

Kannada Song Lyrics in Winamp

ನಿಮ್ಮ ನೆಚ್ಚಿನ media player Winampಆಗಿದ್ದು, ನೀವು ಅದರಲ್ಲಿ ಪ್ರಚಲಿತ ಕನ್ನಡ ಹಾಡಿನ ಸಾಹಿತ್ಯವನ್ನು ನೋಡಬಯಸಿದರೆ, ನಾನು ರೂಪಿಸಿರುವ ತಂತ್ರಾಂಶವನ್ನು ಉಪಯೋಗಿಸಬಹುದು. ಈ ತಂತ್ರಾಂಶವನ್ನು download and install ಮಾಡುವ ವಿಧಾನವನ್ನು ಇಲ್ಲಿ ಪಡೆಯಬಹುದು. ಇದು ಪ್ರಖ್ಯಾತವಾದ, ಕನ್ನಡ ಹಾಡುಗಳ ತಾಣವಾದ Kannadalyrics.comಇಂದ ಸಾಹಿತ್ಯವನ್ನು ಪ್ರದರ್ಶಿಸುತ್ತದೆ.

[Update 1] Version 2.7 ಬಿಡುಗಡೆಯಾಗಿದೆ. ಇದು ID3 tags ಇಂಗ್ಲಿಷ್ನಲ್ಲಿ ಇದ್ದರೂ ಹುಡುಕಬಲ್ಲದು. ಇದು ಇತರೆ ಭಾಷೆಯ ಗೀತೆಗಳ lyricsಇಗಾಗಿ ಗೂಗಲ್ನಲ್ಲಿ ಹುಡುಕಬಲ್ಲದು. ಅದಕ್ಕೆ genre tag ಭಾಷೆಯನ್ನು ಗುರುತಿಸಬೇಕು. ಉದಾಹರಣೆಗೆ ಹಿಂದಿ ಚಿತ್ರದ ಹಾಡಾಗಿದ್ದರೆ genre tag ಅನ್ನು hindi ಅಂತ set ಮಾಡಿ.

[Update 2] Version 2.8 ಬಿಡುಗಡೆಯಾಗಿದೆ. ಇದು query string ಮೂಲಕ Lyrics.html pageಇಗೆ ಕಳುಹಿಸಿದ tagsಅನ್ನು ಕೊಡ ಈಗ ಓದಬಲ್ಲದು. ಇದರಿಂದಾಗಿ ಈಗ direct URLಇಂದ Lyrics ಹುಡುಕ ಬಹುದು.

ಜನ 8, 2008

ಮಾಯಮೃಗ

ಮಾಯಮೃಗದ ಶೀರ್ಷಿಕೆ ಹಾಡು





ಮಾಯಮೃಗ, ಮಾಯಮೃಗ, ಮಾಯಮೃಗವೆಲ್ಲಿ?
ಮಾಯಮೃಗ, ಮಾಯಮೃಗ, ಮಾಯಮೃಗವೆಲ್ಲಿ?

ಬಲು ದೂರದಿ ಹೊಳೆಯುತ್ತಿದೆ ಬಾ ನೀಲಿಯ ಕೆಳಗೆ
ಬಲು ದೂರದಿ ಹೊಳೆಯುತ್ತಿದೆ ಬಾ ನೀಲಿಯ ಕೆಳಗೆ

ಹೊಳೆಯುತ್ತಿವೆ ಕಣ್ಣಂತು ಬಿಡಿ ವಜ್ರದ ಹಾಗೆ
ಹೊಳೆಯುತ್ತಿವೆ ಕಣ್ಣಂತು ಬಿಡಿ ವಜ್ರದ ಹಾಗೆ

ಶರ ವೇಗದಿ ಚಲಿಸುತ್ತಿದೆ ಮಾಯಮೃಗವೆಲ್ಲಿ?
ಶರ ವೇಗದಿ ಚಲಿಸುತ್ತಿದೆ ಮಾಯಮೃಗವೆಲ್ಲಿ?
ಶರ ವೇಗದಿ ಚಲಿಸುತ್ತಿದೆ ಮಾಯಮೃಗವೆಲ್ಲಿ?
ಶರ ವೇಗದಿ ಚಲಿಸುತ್ತಿದೆ ಮಾಯಮೃಗವೆಲ್ಲಿ?

ಜನ 4, 2008

ಮನ್ವಂತರ

ಮನ್ವಂತರ ಧಾರವಾಹಿಯ ಗಾನ ಮತ್ತು ಅದರ ಸಾಹಿತ್ಯ. ಕೇಳಿ ಆನಂದಿಸಿ.


ಮರಳಿ ಬಾ ಮನ್ವಂತರವೆ ಕಂಬನಿಗಳ ಬಳಿಗೆ
ಮರಳಿಸು ಹೊಸ ಚೇತನವ ಬಳಲಿದ ಮನಗಳಿಗೆ

ಮರಳಿ ಬಾ ಮನ್ವಂತರವೆ ಕಂಬನಿಗಳ ಬಳಿಗೆ
ಮರಳಿಸು ಹೊಸ ಚೇತನವ ಬಳಲಿದ ಮನಗಳಿಗೆ

ಕಣ್ಣೀರೆ ಕಡಲಾಗಿ, ಭಾವಗಳೊ ಬರಡಾಗಿ
ಮನದ ಮರಳ ತುಂಬ ನೋವಿನಲೆಯ ಬಿಂಬ

ಕಣ್ಣೀರೆ ಕಡಲಾಗಿ, ಭಾವಗಳೊ ಬರಡಾಗಿ
ಮನದ ಮರಳ ತುಂಬ ನೋವಿನಲೆಯ ಬಿಂಬ

ನೀಡು ಬಾ ಮನ್ವಂತರವೆ ಭಾವಕೆ ಉಸಿರನ್ನು

ಬರಡು ಹೃದಯಗಳಿಗೆ ಜೀವದ ಹಸಿರನ್ನು

ನೆನಪು ನೆನಪು



ನೆನಪು ನೆನಪು...ಅವಳ ನೆನಪು
ಸಾವೆ ಇರದ ಸವಿ ನೆನಪು
ನೆನಪು ನೆನಪು...ಅವಳ ನೆನಪು
ಕೊನೆಯೆ ಇರದ ಚಿರ ನೆನಪು


ಅವಳ ನಗು ಹುಣ್ಣಿಮೆಯ ಬೆಳಕು
ನನ್ನೆದೆ ಬಾನಿಗೆ
ಅವಳ ದನಿ ರಾಗಗಳ ಗಣಿ
ನನ್ನೆದೆ ಹಾಡಿಗೆ


ಧಮನಿ ಧಮನಿಲೂ ಪ್ರೀತಿ ಧ್ಯಾನ
ಒಡಲ ಒಡನಾಡಿ ಅವಳೇ
ಉಸಿರು ಉಸಿರಲೂ ಪ್ರೀತಿ ಗಾನ
ಸುಖದ ಸುವ್ವಾಲಿ ಅವಳೇ...


ನೆನಪು ನೆನಪು...ಅವಳ ನೆನಪು
ಸಾವೆ ಇರದ ಸವಿ ನೆನಪು


ಅವಳುಳಿಸಿ ಹೋದ ಪ್ರೀತಿ ಎದೆಯಲ್ಲಿ ಅಮರವಾಯ್ತು
ಅದು ಸಾಕು ಸಾವಿರ ಜನ್ಮಕು
ಅವಳಾಡಿ ಹೋದ ಮಾತು ಕಿವಿಯಲ್ಲಿ ಕವನವಾಯ್ತು
ಅದೆ ನನ್ನ ಬಾಳಿಗೆ ಸ್ಪೂರ್ಥಿಯು


ಹೊಸ ಉಲ್ಲಾಸ ಉತ್ಸಾಹ ಅವಳಿಂದ ನಾ ಕಂಡೆ ಈ ಜೀವ ಅವಳಲ್ಲವೆ
ಇಲ್ಲಿ ಎಕಾಂಗಿ ನಾನಲ್ಲ ಆ ನೋವು ನನಗಿಲ್ಲ ನನಲ್ಲೆ ಅವಳಿಲ್ಲವೆ


ನೆನಪು ನೆನಪು...ಅವಳ ನೆನಪು
ಸಾವೆ ಇರದ ಸವಿ ನೆನಪು


ನನ ಬಾಳ ದಾರಿಯಲ್ಲಿ ನೆರಳಾಗಿ ಅವಳು ಇರಲು
ನನ್ನೊಲವು ಬಾಡಲು ಸಾಧ್ಯವೆ?
ನಾ ನೋಡೊ ನೋಟದಲ್ಲಿ ಕಣ್ಣಾಗಿ ಅವಳು ಇರಲು
ಜಗವಾಯ್ತು ಸ್ವರ್ಗವು ಮೆಲ್ಲಗೆ


ಆ ಬಿನ್ನಾಣ, ಬಿಗುಮಾನ, ತುಂಟಾಟ, ಕುಡಿನೋಟ ಅಚ್ಚಾಯ್ತು ಎದೆ ಗೂಡಲೆ
ನನ ಸಂಗಾತಿ ತಂದಂತ ಸಂಪ್ರೀತಿ ಇರುವಾಗ ಬೇರೆಲ್ಲ ನನಗೇತಕೆ?


ನೆನಪು ನೆನಪು...ಅವಳ ನೆನಪು
ಸಾವೆ ಇರದ ಸವಿ ನೆನಪು
ನೆನಪು ನೆನಪು...ಅವಳ ನೆನಪು
ಕೊನೆಯೆ ಇರದ ಚಿರ ನೆನಪು



ಅವಳ ನಗು ಹುಣ್ಣಿಮೆಯ ಬೆಳಕು
ನನ್ನೆದೆ ಬಾನಿಗೆ
ಅವಳ ದನಿ ರಾಗಗಳ ಗಣಿ
ನನ್ನೆದೆ ಹಾಡಿಗೆ


ಧಮನಿ ಧಮನಿಲೂ ಪ್ರೀತಿ ಧ್ಯಾನ
ಒಡಲ ಒಡನಾಡಿ ಅವಳೇ
ಉಸಿರು ಉಸಿರಲೂ ಪ್ರೀತಿ ಗಾನ
ಸುಖದ ಸುವ್ವಾಲಿ ಅವಳೇ...