kannada ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
kannada ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಏಪ್ರಿ 25, 2011

Kannada Fonts

ಯಾವುದೇ ಒಂದು ವಸ್ತುವನ್ನು ಉಪಯೋಗಿಸಬೇಕೆಂದರೆ ಅದು ಆಕರ್ಷಕವಾಗಿರಬೇಕು. ಆ ವಸ್ತು ಎಷ್ಟೇ ಉಪಯುಕ್ತವಾದದ್ದಾದರು ನೋಡಲು ಅಂದವಾಗಿರದಿದ್ದರೆ ಜನರು ಅದನ್ನು ಉಪಯೋಗಿಸುವುದು ಬಹಳ ಅಪರೂಪ. ಹಾಗಾಗಿಯೇ ನಾವು ಸೃಷ್ಟಿಸುವ ಕನ್ನಡದ ಅಂತರ್ಜಾಲ ತಾಣಗಳಾಗಲಿ, ಬ್ಲಾಗ್ ಗಳಾಗಲಿ ಅಥವಾ ಕನ್ನಡ ತಂತ್ರಾಂಶಗಳಾಗಲಿ ಆಕರ್ಷಕವಾಗಿರಬೀಕು.

ಅಂತರ್ಜಾಲದ ತಾಣಗಳನ್ನ ಆಕರ್ಷಕವಾಗಿ ಮಾಡಲು ಬೇಕಾಗಿರುವುದು ಒಳ್ಳೆಯ ಫಾಂಟ್ ಗಳು. ಆದರೆ, ಉಚಿತವಾಗಿ ಸಿಗುವ Unicode ಕನ್ನಡ ಫಾಂಟ್ಗಳು ಬಹಳ ಕಡಿಮೆ. ಇದರಿಂದಾಗಿ, ಈಗ ಚಾಲ್ತಿಯಲ್ಲಿರುವ ಹಲವಾರು ಕನ್ನಡ websiteಗಳು ನಿರ್ಧಾರಿತ ಫಾಂಟ್ ತಂತ್ರಜ್ಞಾನವಾದ Unicodeಅನ್ನು ಬಳಸುತ್ತಿಲ್ಲ. ಇದರಿಂದಾಗಿ ಈ ವೆಬ್ ಸೈಟ್ ಗಳನ್ನು ವೀಕ್ಷಿಸಲು plug-inಗಳನ್ನೂ install ಮಾಡಬೇಕಾಗುತ್ತದೆ. ಈ plug-inಗಳು ಬಹುಪಾಲು windows operating system ಮತ್ತು internet explorerಇಗಾಗಿಯೇ ಮಾಡಿರಲಾಗುತ್ತವೆ. ಹಾಗಾಗಿ, ಈ ವೆಬ್ ಸೈಟ್ ಗಳನ್ನು Mac ಅಥವ Linuxನಲ್ಲಿ ವೀಕ್ಷಿಸುವುದಕ್ಕಾಗುವುದಿಲ್ಲ.

ಈ ಕಾರಣದಿಂದಾಗಿಯೇ ನಾನು ನನ್ನದೇ ಫಾಂಟ್ಗಳನ್ನು ಸೃಷ್ಟಿಸುವುದಾಗಿ ಆಲೋಚಿಸಿದ್ದೇನೆ. ಇದಕ್ಕಾಗಿ ನಾನು High-Logic Fontcreatorಅನ್ನುವ ತಂತ್ರಾಂಶವನ್ನು ಖರಿದಿಸಿದ್ದೇನೆ. ಇದು ಮಿಕ್ಕ Font editorಗಳಿಗಿಂತ ಕಡಿಮೆ ಬೆಲೆಯುಳ್ಳ, ಉಪಯೋಗಿಸಲು ಸುಲಭವಾದ, ಹಾಗು Mac ಮತ್ತು Windowsನಲ್ಲಿ ಬಳಸಬಹುದಾದ ತಂತ್ರಾಂಶವೆನ್ನುವ ಕಾರಣಗಳಿಂದಾಗಿ ಇದನ್ನು ಖರಿದಿಸಿದೆ. ಮುಕ್ತ ತಂತ್ರಾಂಶವಾದ
FontForgeಅನ್ನು ಬಲಸಬಹುದಾಗಿತ್ತು. ಆದರೆ, ಅದನ್ನು install ಮಾಡುವುದು ಕಷ್ಟ ಹಾಗು ಬಳಸುವುದು ಕಠಿಣ.

High-Logic FontCreator ಫಾಂಟ್ಗಳನ್ನು TrueType Font(ttf) ಶೈಲಿಯಲ್ಲಿ ರಚಿಸುತ್ತದೆ. ನಾನು ಫಾಂಟ್ಗಳನ್ನು ರಚಿಸಲು Microsoft ಕೊಡುವ Tunga.ttfಅನ್ನು ಆಧಾರವಾಗಿ ಉಪಯೋಗಿಸಿದ್ದೇನೆ. ನಾನು ಈಗ ಫಾಂಟ್ಗಳನ್ನು ಸೃಷ್ಟಿಸಲು typography ಕಲಿಯಬೇಕೆಂದು ಯೋಚಿಸುತ್ತಿದ್ದೇನೆ. ಸಧ್ಯಕ್ಕೆ ಪಂಚರಂಗಿ ಹಾಗು ಅಮೃತಧಾರೆಯ ಚಿತ್ರಗಳ ಹೆಸರಿನಲ್ಲಿರುವ ಫಾಂಟ್ಗಳನ್ನು ರೂಪಿಸುತ್ತಿದ್ದೇನೆ. ಇವು ಅಪೂರ್ಣವಾಗಿರುವ ಕಾರಣ ಇನ್ನೂ ಉಪಯೋಗಿಸುವ ಸ್ಥಿತಿಯಲ್ಲಿಲ್ಲ. ಆದರೆ, ಪರೀಕ್ಷಿಸಬೇಕೆಂದರೆ ಅವುಗಳನ್ನು ಇಲ್ಲಿಂದ ಡೌನ್ಲೋಡ್ ಮಾಡಬಹುದು.



ನಿಮ್ಮ ಬಳಿ ಉತ್ತಮಮಟ್ಟದ ಫಾಂಟ್ಗಳ ಚಿತ್ರಗಳು ಇದ್ದರೆ ನನಗೆ ತಿಳಿಸಿ. ನಾನು ಅವುಗಳನ್ನು High-Logic FontCreatorನಲ್ಲಿ ರಚಿಸಲು ಪ್ರಯತ್ನಿಸುವೆ.

ಫೆಬ್ರ 2, 2011

More Reasons to Love iPhone

ನನಗೆ ಐಫೋನ್ ಪ್ರೀತಿಸಲು ಇನ್ನಷ್ಟು ಕಾರಣಗಳು ಸಿಕ್ಕಿವೆ.

ವಾಯ್ಸ್ ಕಂಟ್ರೋಲ್

ಮೊದಲನೆಯದಾಗಿ ವಾಯ್ಸ್ ಕಂಟ್ರೋಲ್. ಐಫೋನ್ ಇನ ಮಧ್ಯದ ಗುಂಡಿಯನ್ನು (home button) ೨ ಕ್ಷಣಗಳಿಗಿಂತ ಹೆಚ್ಚು ಸಮಯ ಒತ್ತಿಟ್ಟಿ ಕೊಂಡಾಗ voice control ಪ್ರಾರಂಭವಾಗುತ್ತದೆ. ವಾಯ್ಸ್ ಕಾಂಟ್ರೋಲ್ನ ಮೂಲಕ ನಾವು ನಮ್ಮ ದ್ವನಿಯಿಂದ ಐಫೋನ್ ಅನ್ನು ನಿಯಂತ್ರಿಸಬಹುದು. ಐಫೋನ್ ಅನ್ನು ನಿಯಂತ್ರಿಸಲು ಕೆಲವು ಆಜ್ಞೆಗಳನ್ನ (commands) ಬಳಸಬೇಕು.  ಇಂತಹ ಅಗ್ನೆಗಳಿಂದ ಐಫೋನ್ ಅನ್ನು ಹಾಡು ಪ್ರಾರಂಬಿಸಲು/ನಿಲ್ಲಿಸಲು ಅಥವಾ ಐಫೋನ್ ನಲ್ಲಿರುವ ಸಮಪರ್ಕಗಳಿಗೆ ಕರೆ ಮಾಡಲು ಅಥವಾ ಯಾವುದಾದರೋ ಸಂಖ್ಯೆಗೆ ಕರೆ ಮಾಡಲು ನಿರ್ದೇಶಿಸಬಹುದು. ಉದಾಹರಣೆಗೆ: voice control ಶುರುವಾದ ನಂತರ call Ajeya ಎಂದರೆ ಐಫೋನ್ ನಲ್ಲಿರುವ Ajeya ಅನ್ನೋ ಸಂಪರ್ಕಕ್ಕೆ ಕರೆ ಮಾಡುತ್ತದೆ.

ಆದರೆ ನಾನು ನನ್ನ ಸಂಪರ್ಕಗಳ ಹೆಸರನ್ನು ಕನ್ನಡ unicode ಲಿಪಿಯಲ್ಲಿ ಇಟ್ಟಿದ್ದೇನೆ. ಹಾಗಾಗಿ ನನಗೆ ವಾಯ್ಸ್ ಕಂಟ್ರೋಲ್ ಸರಿಯಾಗಿ ಕೆಲಸ ಮಾಡುತ್ತದೋ ಎಂಬ ಅನುಮಾನವಿತ್ತು. Apple ಅವರ ಆಲೋಚನಾ ಪೂರ್ಣತೆಯನ್ನು ಮೆಚ್ಚಬೇಕು. ನನ್ನ ಸಂಪರ್ಕಗಳ ಹೆಸರು ಕನ್ನಡ unicode ನಲ್ಲಿದ್ದರೂ ಐಫೋನ್ ಸರಿಯಾಗಿ ಅರ್ಥ ಮಾಡಿಕೊಂಡಿತು. ಇದು ಭಾರತೀಯ ಉಚ್ಚಾರಣೆಗೆ ಸ್ವಲ್ಪ ಕಷ್ಟಪಟ್ಟರೂ ಬಹುತೇಕ ಸಮಯ ಸರಿಯಾಗಿಯೇ ಕೆಲಸ ಮಾಡುತ್ತದೆ.



ಸಂಪರ್ಕಗಳು

ಐಫೋನ್ ನ "My Contacts" ನಲ್ಲಿ ಹೆಸರುಗಳನ್ನ ಬೇಗ ಹುಡುಕಲು ಬಲ ಬಾಗದಲ್ಲಿ A-Z -# ಎಂಬಂತೆ ಅಕ್ಷರ ಪಟ್ಟಿಯನ್ನು ಕೊಟ್ಟಿದ್ದಾರೆ. ಈ ಅಕ್ಷರಗಳ ಮೇಲೆ ಒತ್ತಿದರೆ ಆಯಾ ಅಕ್ಷರಗಳಲ್ಲಿ ಶುರುವಾಗುವ ಹೆಸರುಗಳು ಕಾಣುತ್ತವೆ. ಆದರೆ ಕನ್ನಡ ಅಕ್ಷರಗಳು ಇಲ್ಲದ ಕಾರಣ ಮತ್ತು ನನ್ನ ಸಂಪರಗಳು ಕನ್ನಡ unicode ಲಿಪಿಯಲ್ಲಿರುವುದರಿಂದ ಸಂಪರ್ಕಗಳನ್ನು ಹುಡುಕುವುದು ತುಂಬಾ ಕಷ್ಟವಾಗುತ್ತಿತ್ತು. 


ಆದರೆ, Apple ನವರು ಇದಕ್ಕೆ ಪರಿಹಾರವಾಗಿ ಒಂದು ವಿದಾನವನ್ನು ಕೊಟ್ಟಿದ್ದಾರೆ. ನಮಗೆ ಬೇಕಾದ ಸಂಪರ್ಕವನ್ನು edit ಮಾಡಿದ ನಂತರ ಕೆಳಗಿರುವ "Add a field " ಗುಂಡಿಯನ್ನು ಒತ್ತಬೇಕು. ಮುಂದಿನ ಪುಟದಲ್ಲಿ "Phonetic First  Name" / "Phonetic Last  Name" ಅನ್ನು ರೋಮನ್ ಲಿಪಿಯಲ್ಲಿ ತುಂಬಬೇಕು.


ಹೀಗೆ ತುಂಬಿದ ನಂತರ "Done" ಒತ್ತಿ ಉಳಿಸಬೇಕು. ಉಳಿಸಿದ ನಂತರ ನಮ್ಮ ಸಂಪರ್ಕ ಈಗ ಸರಿಯಾಗಿ ಆಂಗ್ಲ ಅಕ್ಷರದ section ನಲ್ಲಿ ಕಾಣಿಸುತ್ತದೆ.

ಜನ 28, 2011

ಪ್ರೀತಿ

ಪ್ರೀತಿಯ ಹಿತ ಪಥದ ಮೇಲೆ
ರತಿಪತಿಯ ಲೀಲೆ
ಸ್ವಾತಿಯ ಅಮಿತ ಪದಗಳ ಸುರಿಮಳೆ
ಕೊನೆ ಇಲ್ಲದ ಭಾವನೆಗಳಿಗೆ

ಜನ 27, 2011

Kannada Lyrics Finder

ನಾನು ಸಧ್ಯಕ್ಕೆ iTunes plugin ಒಂದರ ಮೇಲೆ ಕೆಲಸ ಮಾಡುತ್ತಿದ್ದೇನೆ. ಈ plugin  iTunesಇನಲ್ಲಿ ನಡೆಯುತ್ತಿರುವ ಹಾಡಿನ ಸಾಹಿತ್ಯವನ್ನು http://www.kannadalyrics.com/ ಇನಿಂದ ತೋರಿಸುತ್ತದೆ. ಇದ ಸಾಹಿತ್ಯವನ್ನು ಹುಡುಕಲು, ಹಾಡಿನ ಹೆಸರು ಹಾಗು ಚಿತ್ರದ ಹೆಸರು ಕನ್ನಡ unicodeಇನಲ್ಲಿ ಇರಬೇಕು ಹಾಗು genre "Kannada"  ಎಂದು set ಅಗಿರಬೇಕು. ಇದನ್ನು ಉಪಯೋಗಿಸಲು iTunes 10.1.1.4 ಅಥವ ಹೆಚ್ಚಿನ version ಇರಬೇಕು (windows only).


ಇದು ಇನ್ನು ಪೂರ್ಣವಾಗಿಲ್ಲ ಹಾಗಾಗಿ ಹಲವಾರು features ಇನ್ನು ಇಲ್ಲ. ಇದರಲ್ಲಿರುವ ನ್ಯೂನತೆ ಎಂದರೆ ಹಾಡಿನ album art ಸರಿಯಗಿ ತೋರುವುದಿಲ್ಲ.


ಮುಂದಿನ versionಗಳಲ್ಲಿ ನಾನು ತರಲು ಇಚ್ಛಿಸುವ features ಹೀಗಿವೆ:


೧) ಹಾಡಿನ ಹೆಸರು ಹಾಗು ಚಿತ್ರದ ಹೆಸರು ಆಂಗ್ಲದಲ್ಲಿದ್ದರೂ ಅದನ್ನು ಹುಡುಕುವುದು
೨) album artಅನ್ನು ಸರಿಯಾಗಿ ತೋರಿಸುವುದು.
೩) ಸಾಹಿತ್ಯ ಹುಡುಕುವ ಕ್ರಮಾವಳಿಯನ್ನು ಇನ್ನು ಶುದ್ಧೀಕರಿಸುವುದು.
೪) ಚಿತ್ರದ album art ಇಲ್ಲದಿದ್ದಲ್ಲಿ, ತಾನೇ ಹುಡುಕಿ ತೋರಿಸುವುದು.


ನೀವು ಇದನ್ನು ಪರೀಕ್ಷಿಸಬೇಕೆಂದರೆ ಇಲ್ಲಿಂದ download ಮಾಡಿ.







Update 1: Kannada Lyrics Finder ಈಗ ಹಾಡಿನ ಹೆಸರು ಹಾಗು ಚಿತ್ರದ ಹೆಸರು ರೋಮನ್ ಅಕ್ಷರಗಳಲಿದ್ದರೂ ಸಾಹಿತ್ಯವನ್ನು ಹುದುಕಬಲ್ಲದು. ಸಾಹಿತ್ಯ ಹುಡುಕುವ ಕ್ರಮಾವಳಿಯನ್ನು ಇನ್ನೂ ಶುದ್ಧೀಕರಿಸಲಾಗಿದೆ. 

Update 2: Kannada Lyrics Finder ಈಗ ಕನ್ನಡೇತರ ಭಾಷೆಯ ಹಾಡುಗಳ ಸಾಹಿತ್ಯವನ್ನೂ  ತೋರಿಸಬಲ್ಲದು. ಇದು ಸಾಹಿತ್ಯವನ್ನೂ http://tunewiki.com ನಿಂದ ಹುಡುಕಿ ತೋರಿಸುತ್ತದೆ.

ಜನ 10, 2011

Kannada Dictionary

ಪ್ರಿಯ ಗೆಳೆಯರೇ,

ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

ಒಂದು ಭಾಷೆ ಬೆಳಯಬೇಕಾದರೆ ಅದರ ಶಬ್ಧಕೋಶ ಅಥವಾ ನಿಘಂಟು (dictionary) ಕೂಡ ಬೆಳಯಬೇಕು. ಕನ್ನಡ ಬೆಳಯಬೇಕಾದರೆ ಅದರ ನಿಘಂಟು ಕೂಡ ಬೆಳಯಬೇಕು.

ಕನ್ನಡದ ಮೊದಲನೇ ನಿಘಂಟನ್ನು ರಚಿಸಿದವರು Rev. Ferdinand Kittel ಎಂಬ Germany ಮೂಲದವರು.  ಇವರು ಮಂಗಳೂರು, ಧಾರವಾಡ ಹಾಗು ಮಡಿಕೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರು ಹಲವಾರು ಕನ್ನಡ ಕವಿತೆಗಳನ್ನ ಬರೆದಿದ್ದರು. ಇವರು ೧೮೯೪ನಲ್ಲಿ ಮೊದಲನೇ ಕನ್ನಡ-ಆಂಗ್ಲ ನಿಘಂಟನ್ನು ರಚಿಸಿದರು.

ಅಂತರ್ಜಾಲದಲ್ಲಿ ಕೇವಲ ಕೈ ಬೆರಳುಗಲ್ಲಲಿ ಎಣಿಸುವಷ್ಟು ಕನ್ನಡ ನಿಘಂತುಗಳಿವೆ. ಅದರಲ್ಲಿ http://www.baraha/kannada/index.php ಅತಿ ಜನಪ್ರಿಯವಾದದ್ದು ಹಾಗು unicode ಬಳಸುವ ನಿಘಂಟು. ನನಗೆ ಅನಿಸಿದ ಇದರಲ್ಲಿ ಇರುವ ಒಂದು ಕೊರತೆ ಅಂದರೆ, ನಮಗೆ ಯಾವುದೇ ಪದದ ಅರ್ಥ ಬೇಕಾಗಿರುವಾಗ ನಾವು ಈ ಅಂತರ್ಜಲಕ್ಕೆ ಹೋಗಿ, ಪದವನ್ನು type ಮಾಡಿ ಹುಡುಕಬೇಕು. ಇದು ಸ್ವಲ್ಪ ಸಮಯ ವೆಚ್ಚ ಮಾಡುತ್ತದ್ದೆ. ಆದರಿಂದ ನಾನು ಇದೇ ಅಂತರ್ಜಾಲದಿಂದ ಅರ್ಥಗಳನ್ನು ತೋರಿಸುವ ಒಂದು native windows client ಅನ್ನು ನಿರ್ಮಿಸಿದ್ದೇನೆ. ಇದು ಉಪಯೋಗಿಸಲು ಬಲು ಸುಲಭವಾಗಿರುವ ಮತ್ತು ಸಮಯ ಉಳಿಸುವ ತಂತ್ರಾಂಶ.

ಒಮ್ಮೆ ತೆರದ ನಂತರ ಈ ತಂತ್ರಾಂಶವನ್ನು ಕಿರಿದಾಗಿ ಮಾಡಿದರೆ ಅದು system tray ನಲ್ಲಿ ಉಳಿದುಕೊಳ್ಳುತ್ತದೆ. ಹಾಗಾಗಿ task bar ಇನ ಜಾಗ ಉಳಿದುಕೊಳ್ಳುತ್ತದೆ ಮತ್ತು ಇತರೆ ಕಾರ್ಯಗಳಿಗೆ ಅಡ್ಡಿ ಬರುವುದಿಲ್ಲ. ಇದನ್ನು ಪುನಃ ಬಳಸಬೇಕೆಂದಲ್ಲಿ system tray ನಲ್ಲಿ ಇದರ icon ಇನ ಮೇಲೆ ಎರಡು ಸಲ ಒತ್ತಿದ ನಂತರ ಇದು ಮತ್ತೆ ಹಿರಿದಾಗುತ್ತದೆ.

ಈ ತಂತ್ರಾಂಶ ಸಧ್ಯ Windows ಇಗಾಗಿ ನಿರ್ಮಿಸಲಾಗಿದೆ. ಸಮಯ ಸಿಕ್ಕಲ್ಲಿ Mac, iPhone ಮುಂತಾದ ಯಂತ್ರಗಳಿಗೂ ನಿರ್ಮಿಸಲು ಪ್ರಯತ್ನಿಸುವೇನು. ಈ ತಂತ್ರಾಂಶವನ್ನು ನೀವು http://kannadadictionary.googlecode.com/files/KannadaDictionary%20v1.4.msiಇಂದ install ಮಾಡಬಹುದು.

ಜೂನ್ 23, 2010

Kananda on iPhone

ಈ ಹಿಂದೆ ಐಫೋನ್ ನಲ್ಲಿದ್ದ ದೋಷಗಳ ಬಗ್ಗೆ ನಾನು ಮೊದಲು ಬರೆದ ಲೇಖನೆ ಇಲ್ಲಿದೆ.  ಕೊನೆಗೂ ಐಫೋನ್ ನಲ್ಲಿದ್ದ ಕನ್ನಡ font ರೂಪಿಸುವ ದೋಷವನ್ನು iOS ೪ ರಲ್ಲಿ ಸರಿ ಮಾಡಲಾಗಿದೆ. ಈಗಂತು ಐಫೋನ್ ನಲ್ಲಿ ಕನ್ನಡ ಓದೋದಕ್ಕೆ ತುಂಬಾ ಮಜಾ ಬರುತ್ತೆ. iOS ಇನಲ್ಲಿ ಉಪಯೋಗಿಸುತ್ತಿರುವ ಕನ್ನಡ font ಇನ ಹೆಸರು Kannada Sangam MN. 

ಆದ್ರೆ ಬೇಸರದ ಸಂಗತಿ ಅಂದ್ರೆ  keyboard ಹಾಗು ಪ್ರಾದೇಶಿಕ ವಿಧಾನದಲ್ಲಿ (regional format ) 
ಇನ್ನೂ ಕನ್ನಡಕ್ಕೆ ಬೆಂಬಲವಿಲ್ಲ. 

Update: ಐಫೋನ್ ಇನಲ್ಲಿ ಸ್ವಂತವಾದ ಕನ್ನಡ Keyboard ಇಲ್ಲದ್ದಿದ್ದರೂ iTransliterate ಅನ್ನೋ ಒಂದು app ಇದೆ. ಅದನ್ನ ಬಳಸಿಕೊಂಡು ನಾವು ಕನ್ನಡದಲ್ಲಿ ಟೈಪ್ ಮಾಡಬಹುದು. iTransliterate ಗೂಗಲ್ API ಗಳನ್ನ ಬಳಸುತ್ತದೆ. ಆದ್ದರಿಂದ ಅದು ಇಂಟರ್ನೆಟ್ ಉಪಯೋಗಿಸುತ್ತದೆ. ನೀವು ಸೀಮಿತವಾದ data ಪ್ಲಾನ್ ಉಪಯೋಗಿಸುತಿದ್ದರೆ ನಿಮ್ಮ ಜೇಬಿಗೆ ಇದು ಭಾರವಾಗಬಹುದು.













Prior to this, I had written a post regarding the defects in iPhone. Finally, the issue with rendering Kannada fonts on iphone has been resolved in iOS 4. I am enjoying reading Kannada on the iphone. The Kannada font used in iOS is called Kannada Sangam MN. However, there is still no support for Kannada keyboard and Region Format on the iphone.

Update: Though iPhone does not have its own Kannada keyboard, there is an app called iTransliterate. Using this you can type in Kannada. iTransliterate uses Google APIs. Hence it uses internet. If you are using a limited data plan, it will be expensive.

ಫೆಬ್ರ 1, 2010

Kannada Song Lyrics in Winamp

ನಿಮ್ಮ ನೆಚ್ಚಿನ media player Winampಆಗಿದ್ದು, ನೀವು ಅದರಲ್ಲಿ ಪ್ರಚಲಿತ ಕನ್ನಡ ಹಾಡಿನ ಸಾಹಿತ್ಯವನ್ನು ನೋಡಬಯಸಿದರೆ, ನಾನು ರೂಪಿಸಿರುವ ತಂತ್ರಾಂಶವನ್ನು ಉಪಯೋಗಿಸಬಹುದು. ಈ ತಂತ್ರಾಂಶವನ್ನು download and install ಮಾಡುವ ವಿಧಾನವನ್ನು ಇಲ್ಲಿ ಪಡೆಯಬಹುದು. ಇದು ಪ್ರಖ್ಯಾತವಾದ, ಕನ್ನಡ ಹಾಡುಗಳ ತಾಣವಾದ Kannadalyrics.comಇಂದ ಸಾಹಿತ್ಯವನ್ನು ಪ್ರದರ್ಶಿಸುತ್ತದೆ.

[Update 1] Version 2.7 ಬಿಡುಗಡೆಯಾಗಿದೆ. ಇದು ID3 tags ಇಂಗ್ಲಿಷ್ನಲ್ಲಿ ಇದ್ದರೂ ಹುಡುಕಬಲ್ಲದು. ಇದು ಇತರೆ ಭಾಷೆಯ ಗೀತೆಗಳ lyricsಇಗಾಗಿ ಗೂಗಲ್ನಲ್ಲಿ ಹುಡುಕಬಲ್ಲದು. ಅದಕ್ಕೆ genre tag ಭಾಷೆಯನ್ನು ಗುರುತಿಸಬೇಕು. ಉದಾಹರಣೆಗೆ ಹಿಂದಿ ಚಿತ್ರದ ಹಾಡಾಗಿದ್ದರೆ genre tag ಅನ್ನು hindi ಅಂತ set ಮಾಡಿ.

[Update 2] Version 2.8 ಬಿಡುಗಡೆಯಾಗಿದೆ. ಇದು query string ಮೂಲಕ Lyrics.html pageಇಗೆ ಕಳುಹಿಸಿದ tagsಅನ್ನು ಕೊಡ ಈಗ ಓದಬಲ್ಲದು. ಇದರಿಂದಾಗಿ ಈಗ direct URLಇಂದ Lyrics ಹುಡುಕ ಬಹುದು.

ನವೆಂ 7, 2009

Kannada Podcasts from Emory College Language Center

Those interested in learning Kannada can now subscribe to podcasts from the Emory College Language Center on iTunes. The podcasts are created by Nisha Vasan. Right now, there are only a few podcasts uploaded. Hopefully, some more will be added soon.


ಸೆಪ್ಟೆಂ 20, 2009

ಅತಿಥಿ (The Guest)


'ಅತಿಥಿ' ಪಿ. ಶೇಷಾದ್ರಿ ಅವರು ನಿರ್ದೇಶಿಸಿರುವ ಚಿತ್ರ. ತಾರಾಗಣದಲ್ಲಿ ಪ್ರಕಾಶ್ ರೈ, ದತ್ತಾತ್ರೇಯ ಹಾಗು ಮತ್ತಿತರೆ ಕಲಾವಿದರಿದ್ದಾರೆ. ಇದು ಮುನ್ನುಡಿಯ ನಂತರ ಶೇಷಾದ್ರಿಯವರ ಎರಡನೆ ಚಿತ್ರ. ಈ ಚಿತ್ರ ೨೦೦೧ರ 'ಅತ್ಯುತ್ತಮ ಕನ್ನಡ ಚಲನ ಚಿತ್ರ' ಪ್ರಶಸ್ತಿಯನ್ನು ೪೯ನೆಯ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪಡೆಯಿತು.

ಚಿತ್ರದ ಕಥೆ ಹೀಗಿದೆ: ಓರ್ವ ಭಯೋದ್ಪಾದಕನು (ಪ್ರಕಾಶ್ ರೈ) ಒಂದು ವಿಸ್ಫೋಟನೆಯನ್ನು ಕಾರ್ಯಗೊಳಿಸಿ ತನ್ನ ಮುಂದಿನ ಆತಂಕವಾದಿ ಕೃತ್ಯೆಗೆ ತೆರೆಳುವಾಗ ದಾರಿಯಲ್ಲಿ ಸಿಡಿಮದ್ದು ತಯಾರಿಸುವಾಗ ಅಪಘಾತದಲ್ಲಿ ಗಾಯಗೊಳ್ಳುತ್ತಾನೆ . ತನ್ನ ಸಂಗಡಿಗರು ಅಲ್ಲೆ ಹತ್ತಿರವಿರುವ ವೈದ್ಯನ (ದತ್ತಾತ್ರೇಯ) ಮನೆಗೆ ಕರೆದೊಯ್ಯತ್ತಾರೆ. ವೈದ್ಯನು ಇಷ್ಟವಿಲ್ಲದಿದ್ದರೂ ಈ ಅತಿಥಿಯನ್ನು ಸ್ವೀಕರಿಸಬೇಕಾಗುತ್ತದೆ. ಚಲನಶಕ್ತಿವಿಲ್ಲದಿದ್ದರೂ ಬಯೋದ್ಪಾದಕನು ವೈದ್ಯನ ಮನೆಯಲ್ಲೆ ತನ್ನ ಮುಂದಿನ ಕಾರ್ಯಕ್ರಮದ ಸಂಚನ್ನು ಹೂಡಲು ಮುಂದುವರಿಸುತ್ತಾನೆ.

ಚಿತ್ರದ ನಿರೂಪಣೆ ನಿಧಾನವಾಗಿದ್ದರೂ ಪ್ರೇಕ್ಷಕರನ್ನು ಆಸನದ ತುದಿಯಲ್ಲೆ ಇರಿಸುತ್ತದೆ. ಕೆಲ ಸಂಭಾಷಣೆಗಳು ಸ್ವಾರಸ್ಯವಾಗಿವೆ ಹಾಗು ಹೋರಾಟದ ಅವಶ್ಯಕತೆಯನ್ನು ತಿಳಿ ಹೇಳುತ್ತವೆ. ಯಾವುದೆ ಅನಾವಶ್ಯಕ ಬೆಡಗು ಬಿನ್ನಾಣವಿಲ್ಲ. ಹಿನ್ನೆಲೆ ಸಂಗೀತ ಚೆನ್ನಾಗಿದೆ. ಸನ್ನಿವೇಶಕ್ಕೆ ತಕ್ಕಂತೆ ಕೆಲ ಒಳ್ಳೆ ಹಾಡುಗಳಿವೆ. ಮಲೆನಾಡಿನಲೆಲ್ಲೊ ಚಿತ್ರಿಕರಣಗೊಂಡಿದ್ದು ನೆರೆಕರೆಯ ಸೊಬಗು ಚಿತ್ರಮಯವಾಗಿ ಹಾಗು ಪ್ರಶಾಂತವಾಗಿವೆ. ಅಂತ್ಯ ಊಹಿಸಬಹುದದ್ದಾದರೂ ಕೊನೆಯತನಕ ಸ್ಪಷ್ಟವಾಗಿ ಹೇಳಲಾಗದು.

Atithi is an award winning Kannada movie by director P. Sheshadri starring Prakash Rai and Dattatreya. This is the second movie directed by P. Sheshadri after Munnudi. The movie won the "Best Feature Film in Kannada" award at the 49th National Films Awards in 2001.

The movie is about a terrorist (I presume it is a naxalite), played by Prakash Rai, who after carrying out a bomb blast is on the way to his next mission. En route he gets injured due to an accident while preparing the explosives. He is taken to the house of a doctor, played by Dattatreya. The doctor is forced to give refuge to this unwelcome guest. Though immobilized, the terrorist continues to hatch the plans for his next mission in the doctor's house.

The movie is slow paced but still keeps the viewers on the edge of their seat. Some of the dialogs are interesting and tries to offer an explanation to the need for struggle. There is no unnecessary glitz and glamour involved. The background score is wonderful. There are a few wonderful songs which are apt for the situations. Picturised somewhere in the Malnad region, the locales are scenic and serene. The ending is somewhat predictable but still has you guessing until the end.

ಅಕ್ಟೋ 19, 2008

‘British Airways’ನಲ್ಲಿ ಕನ್ನಡ

ನಾನು ಇತ್ತೀಚೆಗೆ ಬೆಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ನಿನ ಹೀಥ್ರೋ ವಿಮಾನ ನಿಲ್ದಾಣಕ್ಕೆ ‘British Airways’ (ಬಿಏ೧೧೮) ವಿಮಾನದಲ್ಲಿ ಪ್ರಯಾಣ ಮಾಡ್ದೆ. ‘British Airways’ಇನ ಸೌಕರ್‍ಯಗಳನ್ನು ನೋಡಿ ಸಂತೋಷಗೊಂಡೆ. ನಿದಾನವಾಗಿ ವಿಮಾನ ಓಡುದಾರಿ (runway) ಇಂದ ಹಾರಲು ಪ್ರಾರಂಬವಾಯ್ತು. ಪದ್ಧತಿಯಂತೆ ಪರಿಚಾರಿಕೆ (Air Hostess) ವಿಮಾನದ ಸುರಕ್ಷಾ ವಿಧಾನವನ್ನು ಮೊದ್ಲು ಆಂಗ್ಲ ಭಾಷೆಯಲ್ಲಿ ಪರಿಚಯಿಸಿದನಂತರ ಹಿಂದಿಯಲ್ಲಿಯೂ ಪರಿಚೈಸಿದ್ಲು. ಆದ್ರೆ ಅವ್ಳು ಇಷ್ಟಕ್ಕೆ ನಿಲ್ಲಿಲ್ಲ. ಕನ್ನಡದಲ್ಲೂ ಕಷ್ಟಪಡ್ಕೊಂಡು ಪ್ರಕಟಿಸಿದ್ಲು. ಇದನ್ನ ಕೇಳಿ ತುಂಬಾ ಖುಷಿ ಆಯ್ತು. ಆದರೆ ಪಕ್ಕದಲ್ಲಿ ಕೂತಿದ್ದ ಹೆಂಗಸಿನ ವರ್ತನೆ ಕೋಪ ಹಾಗು ನೋವುಂಟು ಮಾಡ್ತು. ಆಕೆ ಪರಿಚಾರಿಕೆ ಕನ್ನಡದಲ್ಲಿ ಪ್ರಕಟಿಸುವಾಗ ಅಪಹಾಸ್ಯ ಮಾಡುವಂತೆ ಕಿಸಕಿಸ ಅಂತ ಕಿಸಿತಿದ್ಲು. ನೋವಿನ ಸಂಗತಿ ಅಂದ್ರೆ ಈಕೆ ಕನ್ನಡತಿ. ಈಕೆ ಕನ್ನಡತಿ ಅಂತ ತಿಳ್ದಿದ್ದು ಈಕೆ ಹಿಂದಿನ ಆಸನದಲ್ಲಿ ಕೂತಿದ್ದ, ಬಹುಷ: ತನ್ನ ಸಂಬಂದಿಯಾದ, ಇನ್ನೊಂದು ಮಹಿಳೆಯೊಂದಿಗೆ ಕನ್ನಡದಲ್ಲಿ ಮಾತಡ್ತಿದ್ದದ್ರಿಂದ.

ಪಯಣ ಸುಖವಾಗಿ ಸಾಗ್ತು. ಇನ್ನೇನು ಲಂಡನ್ನ ಹೀಥ್ರೋ ವಿಮಾನ ನಿಲ್ದಾಣ ತಲುಪುತಿರುವಂತೆ ಪರಿಚಾರಿಕನು ಮತ್ತೆ ಸುರಕ್ಷಾ ನಿಯಮಗಳನ್ನು ವಿವರಿಸ್ಲಾರಂಬಿಸಿದನು. ಯಥಾಪ್ರಕಾರವಾಗಿ ಮೊದ್ಲು ಆಂಗ್ಲದಲ್ಲಿ ತಿಳಿಸಿದನು. ನಾನು ಲಂಡನ್ನಲ್ಲಿ ಕನ್ನಡದಲ್ಲಿ ಏಕೆ ಪ್ರಕಟಿಸ್ತಾನೆ ಅಂದ್ಕೊಂಡೆ. ಆದ್ರೆ ಪರಿಚಾರಿಕ ಆಂಗ್ಲ ತದನಂತರ ಹಿಂದಿಯಲ್ಲಿ ಪ್ರಕಟಿಸದೆ ಕನ್ನಡದಲ್ಲಿ ಪ್ರಕಟಿಸಿ ನನಗೆ ಸಂತಸ ಹಾಗು ಆಶ್ಚರ್‍ಯ ಉಂಟು ಮಾಡಿದ. ಪಕ್ಕದಲ್ಲಿ ಕೂತಿದ್ದ ಹೆಂಗಸು ಮತ್ತೆ ಹಿಂದೆಕೂತ್ತಿದ್ದ ಹೆಂಗಸಿಗೆ ‘ಯಾರಿಗ್ ಅರ್ಥ ಆಗುತ್ತೆ ಅಂತ ಕನ್ನಡದಲ್ಲಿ announce ಮಾಡ್ತಾರೊ’ ಅಂತ ಹೇಳಿದ್ಲು. ಇದನ್ನ ಕೇಳಿ ಆಕೆಯ ಅಜ್ಞಾನ ತಿಳಿತು. ಅವಳ ಪ್ರಕಾರ ಪ್ರಯಾಣಿಕರೆಲ್ರಿಗೂ ಆಂಗ್ಲ ಅಥವ ಹಿಂದಿ ಅರ್ಥ ಆಗುತ್ತೆ ಆದ್ರಿಂದ ಅವುಗಳಲ್ಲಿ ‘announce’ ಮಾಡ್ಬಹುದು ಆದ್ರೆ ಕನ್ನಡ ಅರ್ಥ ಆಗೊದಿಲ್ಲ ಅದಕ್ಕೆ ಮಾಡಬಾರ್ದು ಅಂತ. ಇದು ಶಿಕ್ಷಣ ಹೊಂದಿದ ಕನ್ನಡಿಗರ ಆಲೋಚನೆ!

ನಾನು ಈ ಪ್ರಯಾಣದ ಮೊದಲು ‘Lufthansa’, ‘Jet Airways’ ಹಾಗು ‘Air India’ದಲ್ಲಿ ಪ್ರಯಾಣಿಸಿದ್ದೆ. ಆದರೆ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಪ್ರಕಟಿಸೊದನ್ನ ಕೇಳಿದ್ದು. ಕನ್ನಡದಲ್ಲೂ ಪ್ರಕಟಿಸೊ ಈ ಪದ್ಧತಿ ಬರಿ ‘British Airways’ನಲ್ಲಿದ್ಯೊ ಅಥವ ಬೆಂಗಳೂರಿಂದ ತೆರಳೊ ಎಲ್ಲಾ airwaysನಲ್ಲೂ ಹೊಸ್ದಾಗಿ ಆರಂಬಿಸಿದ್ದಾರೊ ಗೊತಿಲ್ಲ. ಒಂದು ವಿದೇಶಿ ಸಂಸ್ಥೆ ಇಂತಹ ಒಂದು ಯೋಜನೆ ಮಾಡಬಹುದಾದರೆ ನಮ್ಮ ದೇಶೀಯ (domestic) ವಿಮಾನ ಚಾಲನ ಸಂಸ್ಥೆಗಳು ಏಕೆ ಅನುಸರಿಸ್ತಿಲ್ಲೊ ಗೊತಿಲ್ಲ.

ಸೆಪ್ಟೆಂ 7, 2008

Shazam

Shazam is a free iPhone application that lets users identify songs using their iPhone. The user needs to keep the iPhone close to the source playing the songs. Shazam collects around 10 seconds audio sample and sends it to the Shazam server to identify the track. Using a proprietory algorithm, Shazam identifies the track and displays the track details like Title, Label, Artist, Album. It also provides links to YouTube videos or iTunes store if they exist.

The Shazam database is quite vast. Most of the songs are identified. It can even identify Hindi songs and to an extent Kannada songs.







Posted by ShoZu

ಜುಲೈ 17, 2008

ಐಫೋನ್ ೩ಜಿ (iPhone 3G)

ಹಲವಾರು ಯತ್ನಗಳ ಹಾಗು ಸುಮಾರು ಘಂಟೆಗಳ ಕಾಲ ಸಾಲುಗಳಲ್ಲಿ ಕಾದ್ನಂತರ ಕೊನೆಗು ನಾನು ನೆನ್ನೆ ಐಫೋನ್ 3Gಯನ್ನು ಖರೀದಿಸ್ದೆ. GPS, accelerometer, app store, 3G, ಮುಂತಾದ ತಂತ್ರಜ್ಞಾನ ಅಂಗೈ ಗಾತ್ರದ ಸಲಕರಣೆಯಲ್ಲಿ ಜೋಡಿಸಿರುವ ಕಾರಣದಿಂದ ಐಫೋನ್ ಅದ್ಭುತ. ಅದರೆ ನನ್ನನ್ನು ಚಕಿತಗೊಳಿಸಿದ್ದು ಇದರ ಮೊದಲನೆಯ ಐಫೋನಲ್ಲಿಲದ Unicodeನ ಬೆಂಬಲ. ನಾನು ಕನ್ನಡ ಹಾಗು ಹಿಂದಿಯನ್ನು ಪರಿಶೀಲಿಸಿದೆ. ಅಕ್ಷರಗಳು ಸರಿಯಾಗಿ ರೂಪಗೊಳ್ಳದ ಕಾರಣ ಸ್ವಲ್ಪ ನಿರಾಶಕಾರಿಯಾದರೂ ಒಂದ್ಹೆಜ್ಜೆ ಮುಂದೆ ಅಂತ ಹೇಳ್ಬಹುದು. ಮುಂದಿನ software updateಗಳಲ್ಲಿ ಇದು ತಿದ್ದಲಾಗುವುದು ಎಂದು ಆಶಿಸ ಬಹುದು.

ಕೆಲ ಗೋಚರಿಸುವ ದೋಷಗಳು:

1. ಕನ್ನಡದಲ್ಲಿ, ‘ಕಾಗುಣಿತದ ಅಕ್ಷರಗಳು’ ಒಂದಾಗಿ ಕಾಣುವುದಿಲ್ಲ.
2. ಒತ್ತಕ್ಷರಗಳು ಕೆಳಗೆ ಬರದೆ ಅರ್ಧಾಕ್ಷರಗಳಾಗಿ ಮೂಡುತ್ತವೆ.
3. ಹಿಂದಿಯಲ್ಲಿ, इ ಅಕ್ಷರ ಪಕ್ಕದ ವ್ಯಂಜನಕ್ಕೆ ಸೇರಿ ಮೂಡುತ್ತದೆ.

Update: iOS ೪ ನಲ್ಲಿ ಈ ದೋಷಗಳನ್ನ ಸರಿಪಡಿಸಲಾಗಿದೆ. ಈ ಲೇಖನೆಯನ್ನು ಓದಿ.

After multiple attempts and long hours in queues, I finally bought the iPhone 3G yesterday. With GPS, accelerometer, app store, 3G and a whole lot of technology built into a palm sized device, iPhone is amazing. But what amazed me was the support for Unicode, which was lacking in the original iPhone. I have been able to test it for Kannada and Hindi. Though it's a bit disappointing, as the glyphs do not render properly, I would say it is a step forward. Something is better than nothing. Hopefully it will be rectified in the future software updates.

Some of the glaring bugs are:

1. In Kannada, the diacritics do not fuse properly.
2. Half consonants do not conjoin to form single glyphs.
3. In Hindi, the diacritic for इ appears on the subsequent letter.

Update: iOS4 fixes the issues with the fonts. Check this post


ಮಾರ್ಚ್ 31, 2008

ಹೊಸ ಯುಗ ಹೊಸ ಸಂಗೀತ

ರಘು ದೀಕ್ಷಿತರ ಹೊಸ album 'Raghu Dixit' ಬಿಡುಗಡೆಯಾಗಿ ಸುಮಾರು ದಿನಗಳಾಗಿವೆ. ಇದರಲ್ಲಿ ಎರಡು ಕನ್ನಡ ಹಾಡುಗಳಿವೆ - ಎರಡೂ ಹಾಡುಗಳು ಸಂತ ಶಿಶುನಾಳ ಷರೀಫರ ಸಾಹಿತ್ಯ ಹೊಂದಿವೆ. Rockಶೈಲಿಯಲ್ಲಿರುವ ಈ albumಅನ್ನು ಇವರ websiteಇನಲ್ಲಿ sample ಮಾಡಬಹುದು. ಹಿಂದಿ, ಆಂಗ್ಲ ಭಾಷೆಗಳೊಂದಿಗೆ ಕನ್ನಡ ಹಾಡುಗಳನ್ನು ಸೇರಿಸಿರುವ ಈ ವಿಧಾನ ನನಗೆ ಇಷ್ಟವಾಯಿತು. ಕನ್ನಡವನ್ನು ಕನ್ನಡೆತರರಿಗೆ ಸ್ವಲ್ಪ ಮಟ್ಟಿಗೆ ಮುಟ್ಟಿಸುವ ಒಳ್ಳೆಯ ಉಪಾಯ ಎಂದು ಹೇಳಬಹುದು.




'ಸಂಪೂರ್ಣ ಆರ್ಟ್ ಫ್ಯಾಕ್ಟರಿ' ತಮ್ಮ 'ಪೂರ್ಣದನಿ' albumಅನ್ನು ಕೊನೆಗು ಬಿಡುಗಡೆ ಮಾಡಿದ್ದಾರೆ. ಹಾಡಿನ ತುಣುಕುಗಳು ಇಲ್ಲಿವೆ. ಮಧುರವಾದ ಹಾಡುಗಳು....ಚೆಲುವಾದ ಸಾಲುಗಳನ್ನು ಹೊಂದಿರುವ ಈ albumನ ಬಿಡುಗಡೆಗೆ ಸುಮಾರು ಒಂದು ವರ್ಷದಿಂದ ಕಾಯುತಿದ್ದೆ.




ಕಾಲೇಜು ವಿದ್ಯಾರ್ಥಿಗಳಾದ 'Urban Lads' ತಮ್ಮ ಮೊದಲನೆಯ album 'Explosion 1'ಇಗೆ ಜಯಂತ್ ಕಾಯ್ಕಿಣಿಯಂತ ಖ್ಯಾತ ಸಂಗೀತಗಾರರನ್ನು ನೆರವುಮಾಡಿಕೊಂಡಿರುವುದು ಮೆಚ್ಚಿಗೆಪಾತ್ರವು. Hip-Hop ಶೈಲಿಯಲ್ಲಿ ಬಹುಶಃ ಇವರದೆ ಮೊದಲನೆಯ ವಾಣಿಜ್ಯ ಯತ್ನವಿರಬೇಕು. ಶ್ರೇಯಸ್ ಹೊಸ್ಕೆರೆ ಯವರ 'ಆಟೊ ಸೂರಿ' ಈ albumಗಿಂತ ಮುಂಚೆ ಚಲಾವಣೆಯಲ್ಲಿದ್ದರು ಅದು ಕೇವಲ ಹವ್ಯಾಸಕ್ಕಾಗಿ ಮಾಡಿರುವುದರಿಂದ ಲೆಕ್ಕಿಸಲಾಗದು.


ಚಿಗುರು ಎಂಬ ಇನ್ನೊಂದು ಗುಂಪಿನ 'ಹೃದಯದಿಂದ' albumಇನ ಹಾಡುಗಳನ್ನು ಇಲ್ಲಿ ಕೇಳ ಬಹುದು. ಇದು ಸುಮಾರು ಎರಡು ವರ್ಷಗಳ ಹಿಂದೆಯೆ ಬಿಡುಗಡೆಯಾಗಿದ್ದರು ಜಾಹಿರಾತುಗಳ, ಪ್ರಕಟಣೆಗಳ ವಿನಾ ಯಾರಿಗು ಇದರ ಅರಿವಾಗದಂತಾಗಿರುವುದು ವಿಷಾದಕರ.

ಜನ 8, 2008

ಮಾಯಮೃಗ

ಮಾಯಮೃಗದ ಶೀರ್ಷಿಕೆ ಹಾಡು





ಮಾಯಮೃಗ, ಮಾಯಮೃಗ, ಮಾಯಮೃಗವೆಲ್ಲಿ?
ಮಾಯಮೃಗ, ಮಾಯಮೃಗ, ಮಾಯಮೃಗವೆಲ್ಲಿ?

ಬಲು ದೂರದಿ ಹೊಳೆಯುತ್ತಿದೆ ಬಾ ನೀಲಿಯ ಕೆಳಗೆ
ಬಲು ದೂರದಿ ಹೊಳೆಯುತ್ತಿದೆ ಬಾ ನೀಲಿಯ ಕೆಳಗೆ

ಹೊಳೆಯುತ್ತಿವೆ ಕಣ್ಣಂತು ಬಿಡಿ ವಜ್ರದ ಹಾಗೆ
ಹೊಳೆಯುತ್ತಿವೆ ಕಣ್ಣಂತು ಬಿಡಿ ವಜ್ರದ ಹಾಗೆ

ಶರ ವೇಗದಿ ಚಲಿಸುತ್ತಿದೆ ಮಾಯಮೃಗವೆಲ್ಲಿ?
ಶರ ವೇಗದಿ ಚಲಿಸುತ್ತಿದೆ ಮಾಯಮೃಗವೆಲ್ಲಿ?
ಶರ ವೇಗದಿ ಚಲಿಸುತ್ತಿದೆ ಮಾಯಮೃಗವೆಲ್ಲಿ?
ಶರ ವೇಗದಿ ಚಲಿಸುತ್ತಿದೆ ಮಾಯಮೃಗವೆಲ್ಲಿ?

ಜನ 4, 2008

ಮನ್ವಂತರ

ಮನ್ವಂತರ ಧಾರವಾಹಿಯ ಗಾನ ಮತ್ತು ಅದರ ಸಾಹಿತ್ಯ. ಕೇಳಿ ಆನಂದಿಸಿ.


ಮರಳಿ ಬಾ ಮನ್ವಂತರವೆ ಕಂಬನಿಗಳ ಬಳಿಗೆ
ಮರಳಿಸು ಹೊಸ ಚೇತನವ ಬಳಲಿದ ಮನಗಳಿಗೆ

ಮರಳಿ ಬಾ ಮನ್ವಂತರವೆ ಕಂಬನಿಗಳ ಬಳಿಗೆ
ಮರಳಿಸು ಹೊಸ ಚೇತನವ ಬಳಲಿದ ಮನಗಳಿಗೆ

ಕಣ್ಣೀರೆ ಕಡಲಾಗಿ, ಭಾವಗಳೊ ಬರಡಾಗಿ
ಮನದ ಮರಳ ತುಂಬ ನೋವಿನಲೆಯ ಬಿಂಬ

ಕಣ್ಣೀರೆ ಕಡಲಾಗಿ, ಭಾವಗಳೊ ಬರಡಾಗಿ
ಮನದ ಮರಳ ತುಂಬ ನೋವಿನಲೆಯ ಬಿಂಬ

ನೀಡು ಬಾ ಮನ್ವಂತರವೆ ಭಾವಕೆ ಉಸಿರನ್ನು

ಬರಡು ಹೃದಯಗಳಿಗೆ ಜೀವದ ಹಸಿರನ್ನು