ಮಾರ್ಚ್ 25, 2008

ಪ್ರೀತಿಯಿಂದ ಮೃತ್ಯುವಿಗೆ

ಬೆಂಗಳೂರಿನ ಕೋರಮಂಗಳದಲ್ಲಿ ಹೆಂಡತಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ನಿರ್ಭಾಗ್ಯಶಾಲಿಯ ವಿಷಾದಕರವಾದ ಸುದ್ದಿ ಕೇಳಿ ಇನ್ನು ಕೇವಲ ಎರಡೆ ದಿನಗಳಾಗಿವೆ. ಎರಡೇ ದಿನಗಳಾದರು ನತದೃಷ್ಟನ ಬಗ್ಗೆ ಬಹಳಷ್ಟು ತಿಳಿದುಕೊಂಡಿದ್ದೆೇನೆ.

ಈತ ಭಾರತದ ಪ್ರಮುಖ  ಮಾಹಿತಿ ತಂತ್ರಜ್ಞಾನ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಾಹಕನಾಗಿದ್ದನು. ತನ್ನ ಹೆಂಡತಿ ವಿದೇಶಿ ಲೇವಾದೇವಿ ಸಂಸ್ಥೆಯಲ್ಲಿ accountantಆಗಿದ್ದಳು. ಹೆಂಡತಿಯು ಇನ್ನೊಬ್ಬನೊಂದಿಗೆ ಪ್ರೇಮಸಂಬಂಧ ಇಟ್ಟಿಕೊಂಡಿರುವುದೆ ಕೊಲೆಗೆ ಕಾರಣ, ವಿಚ್ಛೇದನೆ ಕೇಳಿದರೆ ವರದಕ್ಷಿಣೆಗಾಗಿ ಕಿರುಕುಳ ಕೊಡುತಿದ್ದರು ಎಂದು ಸುಳ್ಳು ದೂರು ಕೊಟ್ಡಾಳು ಎಂಬ ಭಯದಿಂದ ಕೊಂದಿರುವುದಾಗಿ ಮರಣಪತ್ರ ಬರೆದಿದ್ದಾನೆ. ಇವನ ಕಥೆ ಕೇಳಿದರೆ ದುಃಖವಾಗುತ್ತದೆ. ಇವನ ಹೆಂಡತಿ ತಪ್ಪಿತ್ಸತೆ ಎಂದು, ಇವನು ಮಾಡಿದ್ದು ಸರಿ ಎಂದು ನಾನು ಹೇಳುತ್ತಿಲ್ಲ.

Googleನಲ್ಲಿ ಇವನ ಹೆಸರನ್ನು ಹುಡುಕಿದರೆ ಸಿಗುವ ಹಲವಾರು ವಾರ್ತಾ ಕೊಂಡಿಗಳೊಂದಿಗೆ ಒಂದು blogಇನ ಕೊಂಡಿಯೂ ಸಿಗುತ್ತದೆ. ಅದೊಂದು cached ಪುಟ. ನೇರವಾಗಿ ಹೋದರೆ ಸಿಗದು. ಅದು ಮೃತಪಟ್ಟವನ blogಗೆ ಇರಬಹುದು. ಕಡಾಕಂಡಿತವಾಗಿ ಹೇಳಲಾರೆ ಆದರೆ blogಇನ ಕರ್ತೃ ಇವನ ಸ್ವನಾಮಕ. ಈ blogಇನಲ್ಲಿ 'ನಾನು ಪ್ರೀತಿಸಿದವಳು ಆದರೆ ಪಡೆಯಲಾಗದವಳು' ಎಂಬ ಕವನ ಇದೆ. ಇದರಲ್ಲಿ ಹೆಣ್ಣೊಬ್ಬಳನ್ನು ಕುರಿತು ಅವಳ ನಗು, ಸೌಂದರ್ಯ, ದಯೆ ವರ್ಣಿಸಿ ಹೇಗೆ ಅವಳನ್ನು ಚುಂಬಿಸಿ ಅವಳೊಂದಿಗೆ ಇರಲು ಬಯಸುವುದಾಗಿ ಬರದಿದ್ದಾನೆ. 'ಜೀವನವೇಕೆ ಕ್ರೂರ, ನೀವು ಆಶಿಸಿದವರನ್ನು ಸಿಗಲಾಗದ ಸಮಯದಲ್ಲೆ ಕಳುಹಿಸುತ್ತದೆ' ಎಂದು ಕೊನೆಗೊಳ್ಳುವ ಈ ಕವನ ಬಹುಷಃ ಈತನ ಯಾತನೆಗಳನ್ನು ವ್ಯಕ್ತಪಡಿಸುತ್ತವೆ. ಇದು ಕೊಲೆಯ ಘಟನೆಗಿಂತ ಸುಮಾರು ಒಂದುವರೆ ತಿಂಗಳು ಮುಂಚೆ ಬರೆದ ಕವನ. ಪ್ರಾಯಶಃ ಈತನಿಗೆ ಈ ದುರ್ಗತಿಯ ಲೆಕ್ಕವಿದ್ದಿರಬೇಕು.

ಇಷ್ಟೊಂದು ಪ್ರೀತಿಸುವವರು ಹೇಗೆ ತಾನೆ ಕೊಲೆ ಮಾಡಬಹುದೆಂಬದೇ ಆಶಚರ್ಯಕರ! ಈ ಘಟನೆ ಇಂದ Enigmaರ ಹಾಡು 'I'll love you... I'll kill you ' ನೆನಪಾಗುತ್ತದೆ. ಇದರಿಂದ ಯಾರಿಗಾದರೂ ಲಾಭವಾಯಿತೆ? ಪ್ರಾಯಶಃ ಇವನು ಅವಳನ್ನು ಕೊಲ್ಲದಿದ್ದರೆ ಅವಳಾದರೊ ಸಂತೋಷವಾಗಿರ ಬಹುದಿತ್ತು. ಒಂದು ಸಾರಿ ಇಬ್ಬರ ತಂದೆ ತಾಯಿಗಳಿಗೆ ಸಂಭಂದಿಕರಿಗಾಗುವ ದುಃಖದ ಅರಿವಾಗಬೇಕಿತ್ತು.

ಇವರ ದುರ್ಮರಣದಿಂದ ಲಾಭ ಪಡೆದವರು ಹೊಲಸು ಪತ್ರಿಕಾ ಮಾಧ್ಯಮಗಳು. ನಾಚಿಕೆ ಇಲ್ಲದೆ ಪತ್ರಿಕೆಗಳು ಇವರಿಬ್ಬರ orkut profileಗಳನ್ನು ಹುಡುಕಿ ಅವರ ಚಿತ್ರಗಳು, ಶಿಫಾರಸುಗಳನ್ನು ಕದ್ದು ಪ್ರಕಟಿಸಿವೆ. ಅಲ್ಲದೆ ಅವರ profileಗಳನ್ನೆ ಆದಾರವಾಗಿಟ್ಟಿ ಕೊಂಡು ಅವರ ವ್ಯಕ್ತಿತ್ವವನ್ನು ಅಳಿಯಲು ಪ್ರಯತ್ನಿಸಿವೆ. ಇವರೊಂದಿಗೆ ತಾವೆ ಸಾಕ್ಷಿ ಇದ್ದಂತೆ ಕೆಲವರು ಮೃತನ ಹೆಂಡತಿಯನ್ನು ಆರೋಪಿಯಾಗಿಸಿದ್ದಾರೆ. ಅವಳ ಕೊಲೆ ಎಲ್ಲಾ ವ್ಯಭಿಚಾರಿ ಹೆಂಗಸರಿಗೆ ಉದಾಹರಣೆಯಾಗಲೆಂದು ಆಕೆಯ profileನಲ್ಲಿ ಗೀಚಿದ್ದಾರೆ. ಇನ್ನು ಕೆಲವರು Sherlock Holmesಗಳಾಗಿ ಆಕೆಯ ಅನುಮಾನಿತ ಪ್ರೇಮಿಯ profile ಹುಡುಕಿ ಆತನನ್ನು ಬೈದಿದ್ದಾರೆ.

ಜಿ. ಎಸ್. ಶಿವರುದ್ರಪ್ಪನವರ ಸಾಲು ನೆನಪಾಗುತ್ತದೆ - ಮೋಹ ಮುಸುಕಿದ ಬುದ್ಧಿ ಸರ್ವನಾಶದ ಸಿದ್ಧಿ!

1 ಕಾಮೆಂಟ್‌:

ಅನಾಮಧೇಯ ಹೇಳಿದರು...

Ajeya...

It looks like you are touched by the incident... it good you investigate and learn to deal the situtions of this kind... you know, it can happen with any one...
It about managing the life...
As the basic rule of management states.. learn from the previous case studies and baseline the process for a better management... This holds good for any managemnet from professional to personal.... it would be great if you can explain the meaning of GSS quote with respect to this incident... this would tell the world how these two are related.. probably in your next blog....