ರಘು ದೀಕ್ಷಿತರ ಹೊಸ album 'Raghu Dixit' ಬಿಡುಗಡೆಯಾಗಿ ಸುಮಾರು ದಿನಗಳಾಗಿವೆ. ಇದರಲ್ಲಿ ಎರಡು ಕನ್ನಡ ಹಾಡುಗಳಿವೆ - ಎರಡೂ ಹಾಡುಗಳು ಸಂತ ಶಿಶುನಾಳ ಷರೀಫರ ಸಾಹಿತ್ಯ ಹೊಂದಿವೆ. Rockಶೈಲಿಯಲ್ಲಿರುವ ಈ albumಅನ್ನು ಇವರ websiteಇನಲ್ಲಿ sample ಮಾಡಬಹುದು. ಹಿಂದಿ, ಆಂಗ್ಲ ಭಾಷೆಗಳೊಂದಿಗೆ ಕನ್ನಡ ಹಾಡುಗಳನ್ನು ಸೇರಿಸಿರುವ ಈ ವಿಧಾನ ನನಗೆ ಇಷ್ಟವಾಯಿತು. ಕನ್ನಡವನ್ನು ಕನ್ನಡೆತರರಿಗೆ ಸ್ವಲ್ಪ ಮಟ್ಟಿಗೆ ಮುಟ್ಟಿಸುವ ಒಳ್ಳೆಯ ಉಪಾಯ ಎಂದು ಹೇಳಬಹುದು.
'ಸಂಪೂರ್ಣ ಆರ್ಟ್ ಫ್ಯಾಕ್ಟರಿ' ತಮ್ಮ 'ಪೂರ್ಣದನಿ' albumಅನ್ನು ಕೊನೆಗು ಬಿಡುಗಡೆ ಮಾಡಿದ್ದಾರೆ. ಹಾಡಿನ ತುಣುಕುಗಳು ಇಲ್ಲಿವೆ. ಮಧುರವಾದ ಹಾಡುಗಳು....ಚೆಲುವಾದ ಸಾಲುಗಳನ್ನು ಹೊಂದಿರುವ ಈ albumನ ಬಿಡುಗಡೆಗೆ ಸುಮಾರು ಒಂದು ವರ್ಷದಿಂದ ಕಾಯುತಿದ್ದೆ.
ಕಾಲೇಜು ವಿದ್ಯಾರ್ಥಿಗಳಾದ 'Urban Lads' ತಮ್ಮ ಮೊದಲನೆಯ album 'Explosion 1'ಇಗೆ ಜಯಂತ್ ಕಾಯ್ಕಿಣಿಯಂತ ಖ್ಯಾತ ಸಂಗೀತಗಾರರನ್ನು ನೆರವುಮಾಡಿಕೊಂಡಿರುವುದು ಮೆಚ್ಚಿಗೆಪಾತ್ರವು. Hip-Hop ಶೈಲಿಯಲ್ಲಿ ಬಹುಶಃ ಇವರದೆ ಮೊದಲನೆಯ ವಾಣಿಜ್ಯ ಯತ್ನವಿರಬೇಕು. ಶ್ರೇಯಸ್ ಹೊಸ್ಕೆರೆ ಯವರ 'ಆಟೊ ಸೂರಿ' ಈ albumಗಿಂತ ಮುಂಚೆ ಚಲಾವಣೆಯಲ್ಲಿದ್ದರು ಅದು ಕೇವಲ ಹವ್ಯಾಸಕ್ಕಾಗಿ ಮಾಡಿರುವುದರಿಂದ ಲೆಕ್ಕಿಸಲಾಗದು.
ಚಿಗುರು ಎಂಬ ಇನ್ನೊಂದು ಗುಂಪಿನ 'ಹೃದಯದಿಂದ' albumಇನ ಹಾಡುಗಳನ್ನು ಇಲ್ಲಿ ಕೇಳ ಬಹುದು. ಇದು ಸುಮಾರು ಎರಡು ವರ್ಷಗಳ ಹಿಂದೆಯೆ ಬಿಡುಗಡೆಯಾಗಿದ್ದರು ಜಾಹಿರಾತುಗಳ, ಪ್ರಕಟಣೆಗಳ ವಿನಾ ಯಾರಿಗು ಇದರ ಅರಿವಾಗದಂತಾಗಿರುವುದು ವಿಷಾದಕರ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ