ಡಿಸೆಂ 27, 2008

ದಸ್ವಿದಾನಿಯಾ

"ದಸ್ವಿದಾನಿಯಾ" ವಿನಯ್ ಪಾಟಕ್ ನಿರ್ಮಿಸಿ, ನಟಿಸಿರೊ ಹಿಂದಿ ಚಿತ್ರ. ಚಿತ್ರದ ಹೆಸರು ರುಸ್ಸಿಯಾದ "ದೊ ಸ್ವಿದಾನಿಯ" ಅಂದ್ರೆ ವಿದಾಯ ಅನ್ನೊ ಪದಗಳಿಂದ ತೆಗೆದಿದ್ದಾರೆ.

ಅಮರ್ ಕೌಲ್ (ವಿನಯ್ ಪಾಟಕ್) ೩೭ ವರ್ಷದ ಬ್ರಹ್ಮಚಾರಿ. ಇವನು ತನ್ನ ತಾಯಿಯೊಂದಿಗೆ ಮುಂಬಯಿಯಲ್ಲಿ ವಾಸಿಸ್ತಿರ್ತಾನೆ. ಇವನು ಹಾಗೆ ಒಮ್ಮೆ ಹೊಟ್ಟೆ ನೋವಿನ ಪರಿಶೀಲನೆಗೆ ವೈದ್ಯರ ಬಳಿ ಹೋದಾಗ, ತನಗೆ 'stomach cancer' ಇರುವುದಾಗಿ ಹಾಗು ತಾನು ಕೇವಲ ಮೂರು ತಿಂಗಳ ಕಾಲ ಬದುಕುವುದು ಅಂತ ತಿಳಿತಾನೆ. ಅಮರ್ ಈ ಮೂರು ತಿಂಗಳು ಹೇಗೆ ಕಳಿತಾನೆ ಅನ್ನೊದೆ ಚಿತ್ರದ ಕಥೆ.

ಚಿತ್ರದ highights ಅಂದ್ರೆ ಬೆಡಗು ಬಿನ್ನಾಣ ಇಲ್ದಲೆ ಇರೊ ಒಂದು ಕಥೆ, ಅಷ್ಡೊಂದು ಹೆಸರಿಲ್ಲದ ತಾರಾಗಣವಾದರೂ ಕೆಲ ಒಳ್ಳೆ ನಟನೆಗಳು ಮತ್ತು ಕೈಲಾಶ್ ಖೆರ್ ಇಂದ ಅದ್ಭುತ ಧ್ವನಿ ಮುದ್ರಣೆ. "ಅಲ್ವಿದಾ" ಅನ್ನೊ ಹಾಡಂತು ಮೈ ನಿಮಿರಿಸುತ್ತೆ.

Dasvidaniya is a HIndi movie produced by and starring Vinay Pathak. The films name is actually a pun, derived from the Russian phrase "Do Svidania" meaning Good Bye.

Amar Kaul is a 37 year old bachelor. He lives with his mother in Mumbai. When he visits a doctor for treating his stomachache, he learns that he has stomach cancer and that he has only 3 months to live. How Amar lives these 3 months is the story of the film.

The highlights of the film are the deglamorized story, a not so popular cast with some good acting performances and Kailash Kher's background score. The song "Alvida" is a moving one.

ಕಾಮೆಂಟ್‌ಗಳಿಲ್ಲ: