ಮೇ 29, 2012

Kannada Text to Speech

ಕನ್ನಡ ಬರಹವನ್ನು ನುಡಿಯಬಲ್ಲ ತಂತ್ರಾಂಶ ನನಗೆ ತಿಳಿದ ಮಟ್ಟಿಗೆ ತುಂಬಾ ಅಪರೂಪ. IISc ಯ MILE Labನ online tool ಹಾಗು ಶ್ರೀಧರ್ ಅವರ ಸಹಾಯದಿಂದ ಅಳವಡಿಸಿರುವ e-speak ಎಂಬ ಮುಕ್ತ ತಂತ್ರಾಂಶ. IISc ನವರ ಟೂಲ್ ಅನ್ನು ಪ್ರಯೋಗ ಮಾಡಿ ನೋಡಿದೆ. ತುಂಬಾ ಚೆನ್ನಾಗಿದೆ. ಅದರಲ್ಲಿ ಶಬ್ದಗಳ ಉಚ್ಚಾರಣೆ ಸ್ಪಷ್ಟವಾಗಿದ್ದು ಸಹಜವಾಗಿದೆ. ಇದು online ಸಲಕರಣೆಯಾಗಿರುವುದರಿಂದ ಇದನ್ನು ಬಳಸಲು internet ಬೇಕು ಹಾಗು ಇದಕ್ಕೆ ನಾವು ನುಡಿಯಬೇಕಾದ ಬರಹವನ್ನು ನಕಲು ಮಾಡಿ ಇದರಲ್ಲಿ ಅಂಟಿಸಬೇಕು. 'e-Speak'ಅನ್ನು ಸಹ ನಾನು ಪರೀಕ್ಷಿಸಿದೆ. ಅದರಲ್ಲಿ ತುಂಬಾ ರೂಪುಗಳಿದ್ದು ಉಪಯೋಗಿಸಲು ತುಂಬಾ ಸುಲಭ ಎನಿಸುತದೆ. ಇದರಲ್ಲಿ ಹಲವಾರು ಧ್ವನಿಗಳಿವೆ ಹಾಗು ನಕಲು ಮಾಡು ಅವಶ್ಯಕತೆ ಇಲ್ಲ. ನುಡಿಯಬೇಕಾದ ಬರಹದ ಹತ್ತಿರ mouseಅನ್ನು ಇಟ್ಟರೆ ಸಾಕು ಅದೇ ನುಡಿಯುತ್ತದೆ. ಆದರೆ ಇದರ ನುಡಿ ಸರಾಗವಾಗಿಲ್ಲ, roboticಎನಿಸುತ್ತದೆ.

ನಾನು ಕೂಡ ಕನ್ನಡ TTS ತಂತ್ರಾಂಶ ರೂಪಿಸಬೇಕೆಂದು ತುಂಬಾ ಹಂಬಲಿಸಿದ್ದೆ. ಕೊನೆಗೂ ೩-೪ ದಿನಗಳ ಅವದಿಯಲ್ಲಿ "ಮುನ್ನುಡಿ ಎಂಬ ತಂತ್ರಾಂಶವನ್ನು ಸೃಷ್ಟಿಸಿದ್ದೇನೆ. ಇದು Windows OS ಅಲ್ಲಿ ಇರುವ TTSಇನ ಧ್ವನಿಗಳನ್ನು ಉಪಯೋಗಿಸುತ್ತದೆ. ಇದು ಕೂಡ 'ಧ್ವನಿ'ಯಂತೆ SSML ಆಧಾರಿತವಾದದ್ದು. ಇದನ್ನು ಇಲ್ಲಿಂದ ಡೌನ್ಲೋಡ್ ಮಾಡಬಹುದು.

1 ಕಾಮೆಂಟ್‌:

Ravichandrabr ಹೇಳಿದರು...

ತುಂಬಾ ಚೆನ್ನಾಗಿದೆ ಅಜಯ್ ನೀನು ಮಾಡುತ್ತಿರುವ ಪ್ರಯತ್ನ ಚೆನ್ನಾಗಿ ಮೂಡಿ ಬಂದಿದೆ
ನನಗೆ ನಿಮ್ಮ ಸಹಾಯ ಬೇಕಾಗಿದೆ, ನಾನು iPhone4 ಉಪಯೋಗಿಸುತ್ತಿದ್ದೇನೆ ದಯವಿಟ್ಟು ನನಗೆ ಕನ್ನಡದಲ್ಲಿ ಸಿಂಗಾರ ಮಾಡಲು ಹೇಳಿ ಕೊಡಿ,